Header Ads
Header Ads
Breaking News

ದಕ್ಷಿಣ ವಲಯ ಸಾಂಸ್ಕೃತಿಕ ಸ್ಪರ್ಧೆ: ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

 

ತಿರುಪತಿಯ ಶ್ರೀಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕೃತಿಕ ಉತ್ಸವದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದಂತಹ ಆಳ್ವಾಸ್ ಕಾಲೇಜಿನ ಜಾನಪದ ನೃತ್ಯವು ಪ್ರಥಮ, ಕಿರು ಪ್ರಹಸನ ಮತ್ತು ಏಕಾಂಕ ನಾಟಕ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.ಮಂಗಳೂರು ವಿ.ವಿ ಮಟ್ಟದ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್ ಕಾಲೇಜು 8ನೇ ಬಾರಿ ದಕ್ಷಿಣ ವಲಯದಲ್ಲಿ ಪ್ರಶಸ್ತಿ ಪಡೆದುದ್ದಲ್ಲದೆ ೫ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಕಿರುಪ್ರಹಸನ ಮತ್ತು ಏಕಾಂಕ ನಾಟಕವು ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದು ಸತತವಾಗಿ8ನೇ ಬಾರಿ ದಕ್ಷಿಣ ವಲಯ ಮತ್ತು 5ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದದ್ದು ಗಮನಾರ್ಹ ಸಾಧನೆಯಾಗಿದೆ. ಈ ಸ್ಪರ್ಧೆಯಲ್ಲಿ ದಕ್ಷಿಣ ವಲಯದ 45 ವಿವಿಗಳು ಭಾಗವಹಿಸಿದ್ದು ಅದರಲ್ಲಿ14 ಏಕಾಂಕ ನಾಟಕ ತಂಡ, 24 ಕಿರು ಪ್ರಹಸನ ತಂಡ, 34 ಜಾನಪದ ನೃತ್ಯ ತಂಡಗಳಲ್ಲಿ ಆಳ್ವಾಸ್ ತಂಡದ ಸಾಧನೆ ವಿಶೇಷವಾಗಿದೆ. ಈ ಸ್ಪರ್ಧೆಗೆ ಮಂಗಳೂರು ವಿವಿ ಕೊಟ್ಟಂತಹ ಸಹಕಾರ ಸದಾ ಸ್ಮರಣೀಯವೆಂದು ತಿಳಿಸಿದ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 

Related posts

Leave a Reply