Header Ads
Header Ads
Breaking News

ಕಾರ್ಕಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ದನಕಳ್ಳತನ ಪ್ರಕರಣ || ಆರೋಪಿಗಳಿಗೆ ಎಚ್ಚರಿಕೆ ನೀಡಿದ ಕುಮಾರ್ ಚಂದ್ರ

ಉಡುಪಿ ಜಿಲ್ಲೆಯ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಏಳು ಠಾಣೆಯಲ್ಲಿನ ದನಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದನ ಕಳ್ಳತನದ ಆರೋಪಿಗಳಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಹಾಯಕ ವರಿಷ್ಠಾಧಿಕಾರಿ ಕುಮಾರ್ ಚಂದ್ರ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ಎಎಸ್‌ಪಿ ಕಚೇರಿಯಲ್ಲಿ ಕಾರ್ಕಳ ಉಪವಿಭಾಗ ವ್ಯಾಪ್ತಿಗೆ ಒಳಡುವ ಕಾರ್ಕಳ ನಗರ, ಕಾರ್ಕಳ ಗ್ರಾಮಂತರ, ಪಡುಬಿದ್ರೆ, ಕಾಪು, ಶಿರ್ವ ಹೆಬ್ರಿ ಅಜೆಕಾರು, ಠಾಣೆಯಲ್ಲಿ ಈ ಹಿಂದೆ ದನ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿರುವ ಎಲ್ಲಾ ಅರೋಪಿಗಳಿಗೆ ಕರೆಸಿ ಜಿಲ್ಲೆಯಲ್ಲಿ ದನಕಳ್ಳತನ ಪ್ರಕರಣ ಹೆಚ್ಚಾಗಿದ್ದು ಈಗಾಗಲೇ ಹಲವು ದೂರುಗಳು ಬಂದಿರುತ್ತದೆ ಈ ಹಿನ್ನಲೆಯಲ್ಲಿ ಹಳೆ ಅರೋಪಿಗಳನ್ನು ಕರೆಸಿ ಯಾವುದೆ ಅಪರಾಧಗಳಿಗೆ ಬಾಗಿಯಾಗಬಾರದು ಜತೆಗೆ ದನಕಳ್ಳತನ ಪ್ರಕರಣಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ವಿವಿಧ ಠಾಣೆಯಲ್ಲಿ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 67 ಆರೋಪಿಗಳಿಗೆ ಪೇರೆಡ್ ನಡೆಸಲಾಯಿತು. ಕಾರ್ಕಳ ಉಪವಿಭಾಗದ ಉಪಾಧೀಕ್ಷಕ ಕೃಷ್ಣ ಕಾಂತ್, ವೃತ್ತ ನಿರೀಕ್ಷಕ ಹಾಲ್ ಮೂರ್ತಿ, ನಗರ ಠಾಣಾ ಪಿಎಸ್ ಐ ನಂಜನಾಯ್ಕ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *