
ಭಟ್ಕಳ ತಾಲೂಕಿನ ಮುರ್ಡೆಶ್ವರದ ಬಸ್ತಿಯ ಸಮಿಪ ದನ ಹಾಗು ಎಮ್ಮೆಗಳ ಚರ್ಮವನ್ನು ತುಂಬಿದ ಲಗೇಜ್ ರಿಕ್ಷಾವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಟ್ಕಳದ ಇಸ್ಮಾಯಿಲ್ ಎನ್ನುವ ವೈಕ್ತಿಯೊಬ್ಬರು ಹುಬ್ಬಳ್ಳಿಯ ಮುಸ್ತಾಕ್ ಅಹಮ್ಮದ್ ಎಂಬವರೊಬ್ಬರಿಗೆ ದನ ಹಾಗು ಎಮ್ಮೆಯ zಚರ್ಮವನ್ನು ಮಾರಾಟ ಮಾಡಿದ್ದು ಭಟ್ಕಳದಿಂದ ಆಟೊ ರಿಕ್ಷಾದಲ್ಲಿ ಗೋವುಗಳ ಚರ್ಮವನ್ನು ತುಂಬಿಸಿ ಹುಬ್ಬಳ್ಳಿಯ ಕಡೆ ಸಾಗಿಸುವಾಗ ಭಟ್ಕಳ ತಾಲೂಕಿನ ಮುರ್ಡೆಶ್ವರದ ಭಸ್ತಿಯಲ್ಲಿ ಸಂಘಪರಿವಾರದವರ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರಿಕ್ಷಾ ಡ್ರೈವರ್ ಮಹಮ್ಮದ್ ಇಲಿಯಾಸ್ನನ್ನು ಹೆಚ್ಚಿನ ವಿಚಾರಣೆಗಾಗಿ ಕೌಸ್ ಸ್ಲೋಟರ್ ಆಕ್ಟ ಅಡಿಯಲ್ಲಿ ತನಿಕಾಧಿಕಾರಿ ನೆತ್ರತ್ವದಲ್ಲಿ ವಶಕ್ಕೆ ಪಡೆಯಲಾಯಿತು.