Breaking News

ದಯಾನಾಯಕ್ ಕೊರಳಿಗೆ ಅಕ್ರಮ ಗಣಿಗಾರಿಕೆ?

ಬೆಂಗಳೂರು: ಜಂತಕಲ್‌ನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಮುಂಬೆ ಉದ್ಯಮಿಗಳಿಗೆ ಕರ್ನಾಟಕ ರಾಜ್ಯ ಸರಕಾರದ ಪರವಾನಿಗೆ ದೊರಕಿಸಲು ಎನ್‌ಕೌಂಟರ್ ಖ್ಯಾತಿಯ ದಯಾ ನಾಯಕ್ ಒತ್ತಡ ಹೇರಿದ್ದರು ಎಂಬ ಅಂಶ ಈಗ ಚರ್ಚೆಗೆ ಬಂದಿದೆ.
ಗಣಿ ಪರವಾನಿಗೆ ವಿಷಯದಲ್ಲಿ ಈಗಾಗಲೇ ಬಂಧಿತರಾಗಿರುವ ಐ‌ಎ‌ಎಸ್ ಅಧಿಕಾರಿ ಗಂಗಾರಾಮ್ ಬಡೇರಿಯ ಈ ಅಂಶವನ್ನು ತನಿಖಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು ಇದರೊಂದಿಗೆ ದಯಾ ನಾಯಕ್ ವಿಶೇಷ ತನಿಖಾ ತಂಡದ ಎದುರು ಹಾಜರಾಗಿ ವಿವರ ನೀಡಬೇಕಾದ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ.
ಮುಂಬೈ ಮೂಲದ ಗಣಿ ಉದ್ಯಮಿ ಗೋಯಲ್‌ಗೆ ಗಣಿಗಾರಿಕೆ ಪರವಾನಿಗೆ ಕೊಡಿಸಲು ಆಗಿನ ಮುಖ್ಯಮಂತ್ರಿ ಎಚ್‌ಡಿ.ಕುಮಾರ್‌ಸ್ವಾಮಿಯನ್ನು ಸಂಪರ್ಕಿಸಿದ್ದ ದಯಾ ನಾಯಕ್ ಎಚ್.ಡಿ. ಕುಮಾರ್‌ಸ್ವಾಮಿ ಮೂಲಕ ಆಗಿನ ಗಣಿ ಇಲಾಖೆಯ ಅಧಿಕಾರಿ ಆಗಿದ್ದ ಗಂಗಾರಾಮ್ ಮೇಲೆ ಒತ್ತಡ ಹೇರಿದ್ದರು. ವಾಸ್ತವದಲ್ಲಿ ಗಂಗಾರಾಮ್‌ಗೂ ಕುಮಾರಸ್ವಾಮಿಗೂ ಪರಿಚಯವೇ ಇರಲಿಲ್ಲ. ಇಬ್ಬರನೂ ಪರಿಚಯಿಸಿದ್ದೇ ದಯಾನಾಯಕ್ ಎಂದು ಹೇಳಲಾಗುತ್ತಿದೆ. ಗಣಿಗಾರಿಕೆಗೆ ಅನುಮತಿ ನೀಡಿದ ಬಳಿಕ ಕುಮಾರ್ ಸ್ವಾಮಿ ಮತ್ತು ಗಂಗಾರಾಮ್‌ರಿಗೆ ಮುಂಬೈಯಲ್ಲಿ ರಾಜಾತಿಥ್ಯ ಒದಗಿಸಿಸಲಾಗಿತ್ತು. ಇದರ ಬಳಿಕವೂ ಹಲವು ಬಾರಿ ಇಬ್ಬರೂ ಮಂಬೈಗೆ ತೆರಳಿ ಆತಿಥ್ಯ ಅನುಭವಿಸಿ ಬಂದಿದ್ದಾರೆ ಎಂಬಮಾಹಿತಿ ಈಗ ಹೊರ ಬರುತ್ತಿದೆ.
ಅಕ್ರಮ ಗಣಿಗಾರಿಕೆ ಕುರಿತು ಅಂದಿನ ಲೋಕಾಯುಕ್ತ ನ್ಯಾ.ಎನ್. ಸಂತೋಷ ಹೆಗ್ಡೆ ವಿಚಾರಣೆ ನಡೆಸಿದ್ದ ಸಮಯದಲ್ಲೂ ಗಂಗಾರಾಮ್ ಬುಡೇರಿಯರವರು ದಯಾ ನಾಯಕ್‌ರ ಒತ್ತಡದ ಕಾರಣದಿಂದಾಗಿ ತಾನು ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಬೇಕಾಗಿ ಬಂದಿತ್ತು ಎಂಬ ವಿಷಯವನನ್ನು ತಿಳಿಸಿದ್ದರು ಮೂಲಗಳು ಖಚಿತ ಪಡಿಸಿವೆ.
ಅಕ್ರಮ ಗಣಿಗಾರಿಕೆಯ ವಿಷಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈಗ ದಯಾನಾಯಕ್ ಹಾಗೂ ಎಚ್‌ಡಿ ಕುಮಾರ್‌ಸ್ವಾಮಿಯ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

Related posts

Leave a Reply