Header Ads
Breaking News

ದಲಿತರನ್ನು ಬೀದಿನಾಯಿಗಳಿಗೆ ಹೋಲಿಸಿದ ಪಕ್ಷಕ್ಕೆ ಮತ ನೀಡಬೇಡಿ: ಡಾ| ರಘು ಹೇಳಿಕೆ

ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಅನಂತ ಕುಮಾರ್ ಹೆಗಡೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾರೆ. ಇದರ ವಿರುದ್ದ ದಲಿತರು ಪ್ರತಿಭಟನೆ ಮಾಡುವಾಗ ಅವರನ್ನು ಬೀದಿನಾಯಿಗಳಿಗೆ ಹೋಲಿಸುತ್ತಾರೆ. ಕೀಳುಮಟ್ಟದಲ್ಲಿ ದಲಿತರನ್ನು ಕಾಣುವ ಪಕ್ಷಕ್ಕೆ ಮತ ನೀಡಬೇಡಿ. ದೇಶದಲ್ಲಿ ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬಾರದು ಇದಕ್ಕಾಗಿ ದಲಿತ ಸಮಾಜದ ಬಂಧುಗಳು ಯೋಚನೆ ಮಾಡಿ ಮತದಾನ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಡಾ| ರಘು ಹೇಳಿದರು.

ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನರೇಂದ್ರ ಮೋದಿಯವರ ಸಂಪುಟದ ಸದಸ್ಯರು ಮತ್ತು ಮುಖಂಡರು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಹೇಳಿಕೆ ನೀಡುತ್ತಾರೆ ಮೋದಿಯವರಿಗೆ ಇವರ ಬಾಯಿ ಮುಚ್ಚಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ. ಇದನ್ನು ದಲಿತರು ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕು. ಭಾರತದ ಸಂವಿಧಾನವು ಎಲ್ಲಾ ವರ್ಗದ ಜನರಿಗೆ ಅವಕಾಶ ಮಾಡಿ ಕೊಟ್ಟಿದೆ. ಈಗಿರುವಾಗ ಬದಲಾವಣೆಯ ಪ್ರಶ್ನೆ ಬರುವುದಿಲ್ಲ. ಗುಜರಾತ್, ಉತ್ತರಪ್ರದೇಶ, ರಾಜಸ್ಥಾನದಲ್ಲಿ ದಲಿತರ ಮೇಲೆ ಹಲ್ಲೆಗಳದಾಗ ಅಲ್ಲಿನ ಮುಖ್ಯಮಂತ್ರಿಗಳಾಗಲಿ, ನರೇಂದ್ರಮೋದಿಯಾಗಲಿ ಮಾತನಾಡುವುದಿಲ್ಲ. ಕಾಂಗ್ರೆಸ್ ಸರಕಾರ ದಲಿತ ವರ್ಗದವವರ ಅಭಿವೃದ್ದಿಗೆ ಹಲವು ಸೌಲಭ್ಯಗಳನ್ನು ನೀಡುತ್ತ ಬಂದಿದೆ ಎಂದು ಹೇಳಿದರು

ಸುಳ್ಯದ ಶಾಸಕ ಎಸ್. ಅಂಗಾರ ಅವರು ಕೂಡ ಇತ್ತಿಚಿನ ದಿನಗಳಲ್ಲಿ ಕಾಂಗ್ರೆಸ್ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ತಾಲೂಕಿಗೆ ನಾವು ತಂದ ಯೋಜನೆಗಳನ್ನು ನಾನು ತಂದಿದ್ದೇನೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜನರನ್ನು ಧಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೆಗಳನ್ನು ಕೊಡುವುದನ್ನು ಈಗ ಅಂಗಾರರು ಕಲಿತುಕೊಂಡಿದ್ದಾರೆ. ಬೆಳಂದೂರು ಕಾಲೇಜು ಸ್ಥಳಾಂತರ ವಿರುದ್ದ ಶಾಸಕರು ಪ್ರತಿಭಟನೆ ಮಾಡಿದ್ದರು. ಆದರೆ ಅದನ್ನು ಶಾಸಕರ ಸಾಧನೆಯ ಪಟ್ಟಿಯಲ್ಲಿ ತೋರಿಸಿದ್ದಾರೆ. ಅರಂತೋಡಿನ ಅಂಗಡಿಮಜಲು ಸೇತುವೆ ನಿರ್ಮಾಣಕ್ಕೆ ನನ್ನ ಪ್ರಯತ್ನದಲ್ಲಿ ೩ ಕೋಟಿ ಅನುದಾನ ಬಂದಿದೆ. ಅದೇ ರೀತಿ ರಾಮಕುಂಜದಲ್ಲಿ 2 ರಸ್ತೆ, ಕೊಲ್ಲಮೊಗ್ರ-ಬೆಂಡೋಡಿ ಸೇತುವೆ, ಅರಂಬೂರು ಸೇತುವೆ, ಇಂತಹ ಹಲವು ಅಭಿವೃದ್ದಿ ಕಾರ್ಯಗಳು ನನ್ನ ಸ್ವಪ್ರಯತ್ನದಲ್ಲಿ ಆಗಿದೆ. ಇದರಲ್ಲಿ ಶಾಸಕರು ಅನುದಾನ ತರಿಸಿ ಮಾಡಿಸಿಲ್ಲ. ಈ ಎಲ್ಲಾ ಯೋಜನೆಗಳಲ್ಲಿ ಶಾಸಕರ ಶಿಫಾರಸ್ಸು ಪತ್ರ ಇದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಮುಖಂಡರಾದ ಪಿ.ಸಿ.ಜಯರಾಮ್, ಎಸ್. ಸಂಶುದ್ದೀನ್, ಗೋಕುಲ್‌ದಾಸ್, ಜೂಲಿಯಾನ ಕ್ರಾಸ್ತಾ, ಸತೀಶ್ ಕೂಜುಗೋಡು, ವಿನೂಪ್ ಮಲ್ಲಾರ, ಬೀರಾಮೊ ದೀನ್, ಜೆಡಿಎಸ್ ಮುಖಂಡ ಜಾಕೆ ಮಾಧವ ಗೌಡ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *