Header Ads
Header Ads
Breaking News

ದಲಿತರಿಗೆ ಅಗೌರವ ತೋರಿದ ಡಿಸಿ ನಮಗೆ ಬೇಡ- ದಲಿತ ಸಂಘಟನೆಗಳ ಆಗ್ರಹ

ಬಂಟ್ವಾಳ: ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡದ ದಲಿತರ ಕುಂದುಕೊರತೆ ನಿವಾರಣ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರು ಡಿಸಿ ಮನ್ನಾ ಜಮೀನಿನ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸಭೆ ಬಹಿಷ್ಕರಿಸಿ ತೆರಳುವ ಮೂಲಕ ದಲಿತರಿಗೆ ಅಗೌರವ ತೋರಿದ್ದಾರೆ. ದಲಿತರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿ ತನ್ನ ಈ ನಡವಳಿಕೆಯ ಬಗ್ಗೆ ನೈತಿಕ ಹೊಣೆ ಹೊತ್ತು ಈ ಜಿಲ್ಲೆ ಬಿಟ್ಟು ತೆರಳಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.


ಬುಧವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ ದಲಿತರಿಗೆ ಮೀಸಲಿರುವ ಡಿಸಿ ಮನ್ನಾ ಜಮೀನಿನ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸಭೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ. ಸಭೆಯಲ್ಲಿ ಏನೇ ಪ್ರಶ್ನೆ ಮಾಡಿದರೂ ಬಾಯಿ ಮುಚ್ಚಿಸುತ್ತಾರೆ. ಇಂತಹ ಜಿಲ್ಲಾಧಿಕಾರಿಯಿಂದ ದಲಿತರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ. ಜಿಲ್ಲೆಯ ವಿವಿಧ ಮೂಲೆಗಳಿಮದ ದಲಿತರು ನ್ಯಾಯ ಅಪೇಕ್ಷಿಸಿ ಸಭೆಗೆ ಬಂದಿದ್ದರೂ ಜಿಲ್ಲಾಧಿಕಾರಿಯ ವರ್ತನೆಯಿಂದ ನಿರಾಸೆಗೊಂಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಈ ಜಿಲ್ಲೆ ಬಿಟ್ಟು ತೆರಳಬೇಕು ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ರಾಘವೇಂದ್ರ ಸುರುಳಿಮೂಲೆ, ಸತೀಶ್ ಅರಳ, ರಾಜಪಲ್ಲಮಜಲು, ಜನಾರ್ದನ ಬೋಳಂತೂರು, ಜಯ ವಿ.ಸಂಪೊಳಿ, ಶೇಖರ ಕರ್ತಲ ಬೆಟ್ಟು ಹಾಜರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply