Breaking News

ದಲಿತರ ಮನೆಯಲ್ಲಿ ಜಾನುವಾರು ಮಾಂಸದ ಹಿನ್ನಲೆಯಲ್ಲಿ ಹಲ್ಲೆ, ಖಂಡಿಸಿ ಉಡುಪಿಯಲ್ಲಿ ದಸಂಸ ವತಿಯಿಂದ ಪ್ರತಿಭಟನೆ

ಕುಂದಾಪುರ ತಾಲೂಕು ಮುವಾಡಿಯಲ್ಲಿ ನಡೆದ ದಲಿತರ ಮನೆಯಲ್ಲಿ ದನದ ಮಂಸ ಇದೆ ಎಂಬ ಗುಮಾನಿಯ ಮೇಲೆ ಹಲ್ಲೆ ನಡೆಸಿರುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಪ್ಪಿಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲಶಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ದಲಿತ ಸಂಘರ್‌ಷ ಸಮಿತಿಯ ಜಿಲ್ಲಾ ಸಂಚಾಲಕ ನಾರಾಯಣ ಮಣೂರು ಮಾತನಾಡಿ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಒಬ್ಬರ ಆಹಾರ ಪದ್ಧತಿಯನ್ನ್ನು ವಿರೋಧಿಸಿ ನಡು ರಾತ್ರಿಯಲ್ಲಿ ಹಲ್ಲೆ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಆಹಾರ ಆಯ್ಕೆ ಅವರಿಗೆ ಸಂಭಂಧ ಪಟ್ಟದ್ದು ಆದನ್ನು ವಿರೋಧಿಸಲಿಕ್ಕೆ ಇವರು ಯಾರು? ಮನೆಯ ಹೆಣ್ಣು ಮಕ್ಕಳ ಮೇಳೆ ದೌರ್ಜನ್ಯವೇಸಗಿದ್ದಾರೆ. ಇದು ಖಂಡನೀಯ ಮನೆಯ ಹಿರಿಯರನ್ನು ತಾಯಿ ಎಂದು ಗೌರವಿಸುವುದಾಗಿ ಬೂಸಿ ಬಿಟ್ಟು ಒಂದು ಪ್ರಾಣಿಯನ್ನು ತಾಯಿ ಎಂದು ವೈಭವೀಕರಿಸುವುದು ಎಷ್ಟು ಸರಿ? ತಪ್ಪಿತಸ್ಥರನ್ನು ಕೋಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು

Related posts

Leave a Reply