Header Ads
Header Ads
Breaking News

ದಲಿತ್ ಸೇವಾ ಸಮಿತಿಯಿಂದ ದಲಿತರಿಗೆ ಅನ್ಯಾಯವೆಸಗಿರುವ ಆರೋಪ

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ವಿರುದ್ಧ ಪ್ರತಿಭಟನೆಗೆ ಪರ್ಯಾಯವಾಗಿ ಇದೀಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವಿಧಾನಸೌಧಧ ಮುಂದೆ ಪ್ರತಿಭಟನೆ ನಡೆಯಿತು.ದಲಿತ ಸೇವಾ ಸಮಿತಿ ದಲಿತರಿಗೆ ಅನ್ಯಾಯವೆಸಗಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವಿರುದ್ಧ ಈ ಹಿಂದೆ ಪ್ರತಿಭಟನೆಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ವಿರುದ್ಧ ಘೋಷಣೆಯನ್ನೂ ಆ ಸಂದರ್ಭದಲ್ಲಿ ಕೂಗಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಇಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆಯನ್ನು ನಡೆಸಿದ್ದು, ದಲಿತ ಸೇವಾ ಸಮಿತಿಯ ಸೇಸಪ್ಪ ಬೆದ್ರಕಾಡು ವಿರುದ್ಧ ಘೋಷಣೆಯನ್ನು ಕೂಗಲಾಯಿತು.ಸೇವಾ ಸಮಿತಿಯಲ್ಲಿ ಸಮಾಜ ವಿರೋಧಿ ವ್ಯಕ್ತಿಗಳೇ ತುಂಬಿದ್ದು, ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Related posts

Leave a Reply