Breaking News

ದಲಿತ್ ಸೇವಾ ಸಮಿತಿ ಅಧ್ಯಕ್ಷರ ರಾಜೀನಾಮೆ ವಿಚಾರ, ಜಿಲ್ಲಾಧ್ಯ ಸೇಸಪ್ಪ ಬೆದ್ರಕಾಡು ಸ್ಪಷ್ಟನೆ

ಪುತ್ತೂರು : ತಾಲೂಕು ದಲಿತ ಸೇವಾ ಸಮಿತಿಯ ಅದ್ಯಕ್ಷರಾದ ಗಿರಿಧರ್ ನಾಯ್ಕರವರ ರಾಜೀನಾಮೇಯನ್ನು ದಲಿತ್ ಸೇವಾ ಸಮಿತಿಯ ಜಿಲ್ಲಾದ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ರವರು ಕೇಳಿರುತ್ತಾರೆಯೇ ಹೊರತು ಗಿರಿದರ್ ನಾಯ್ಕ್ ರವರು ರಾಜಿನಾಮೆ ಕೊಟ್ಟಿಲ್ಲ. ಗಿರಿದರ್ ನಾಯ್ಕ್ ರವರು ಜಿಲ್ಲಾದ್ಯಕ್ಷರ ಕಿರುಕುಳದಿಂದ ಮತ್ತು ಜಿಲ್ಲಾದ್ಯಕ್ಷರು ಭ್ರಷ್ಟಚಾರದ ಅರೋಪ ಹೊರಿಸಿದ್ದರಿಂದ ರಾಜಿನಾಮೆ ಕೋಟ್ಟಿರುತ್ತೆನೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅದರೆ ತಾಲೂಕು ಅದ್ಯಕ್ಷರಾದ ಗಿರಿದರ್ ನಾಯ್ಕ್ ರ ಮೇಲೆ ಹಲವಾರು ಅರೋಪ ಗಳಿರುವುದರಿಂದ ರಾಜೀನಾಮೆ ಕೇಳಿದ್ದನೆ ಎಂದು ದಲಿತ ಸೇವಾ ಸಮಿತಿಯ ಜಿಲ್ಲಾದ್ಯಕ್ಷ ಸೇಸಪ್ಪ ಬೆದ್ರಕಾಡು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ತಾಲೂಕು ದಲಿತ ಸೇವಾ ಸಮಿತಿಯ ಅದ್ಯಕ್ಷರಾದ ಗಿರಿಧರ್ ನಾಯ್ಕರವರು ದಲಿತ ರನ್ನು ದಲಿತರೊಂದಿಗೆ ಎತ್ತಿ ಕಟ್ಟಿ ವೈಷಮ್ಯ ಸೃಷ್ಠಿಸಿ ಬಡಿದಾಡಿಕೊಂಡ ಪ್ರಕರಣ ದಾಖಲಾಗುವ ತನಕದ ಘಟನೆ ನಡೆದಿರುತ್ತದೆ. ಪುತ್ತೂರು ಹಾಗೂ ನೆಲ್ಯಾಡಿಯಲ್ಲಿ ದಲಿತ ಸದಸ್ಯರ ಮೇಲಿನ ಹಲ್ಲೆಗಳೇ ಸಾಕ್ಷಿಯಾಗಿವೆ. ಹಾಗೂ ಅದಿಕಾರಿಗಳೂಂದಿಗೆ ಅಸಭ್ಯ ವರ್ತನೆ, ಜನಪ್ರತಿನಿದಿಗಳಿಗೆ ಅವ್ಯಾಚ್ಯವಾಗಿ ನಿಂದಿಸುವುದು, ಮದ್ಯಪಾನ ಸೇವಿಸಿ ಸರಕಾರಿ ಕಛೇರಿಗಳಿಗೆ ಬೇಟಿ ನಿಡುವುದು, ಹಾಗೂ ಪೋಲಿಸ್ ಅದಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿರುವ ಆರೋಪಗಳು ಕೂಡ ಇದೆ. ಇವರ ಮೇಲೆ ಹಲವಾರು ಬಡವರ್ಗದ ಜನರು ನೊಂದು ಪೋಲಿಸ್ ಠಾಣೆಗಳಿಗೆ ದೂರು ನೀಡಿದ್ದು, ಅದರಲ್ಲಿಯೂ ದಲಿತ ವರ್ಗದವರೇ ಗೃಹ ಸಚಿವರಿಗೆ, ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿರುತ್ತಾರೆ.
ಗಿರಿಧರ್ ನಾಯ್ಕ್ ರವರು ದಲಿತರ ಪರವಾಗಿ ನ್ಯಾಯ ಕೇಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಎಕೆಂದರೆ ಇವರ ಮೇಲೆ ದಲಿತರೆ ಪೋಲಿಸ್ ಇಲಾಖೆಗೆ ದೂರು ನೀಡಿ ಪೋಲಿಸರಿಂದ ರಕ್ಷಣೆ ಕೇಳಿರುತ್ತಾರೆ. ಹಿಗಾಗಿ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಿದ್ದೇನೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಪುತ್ತೂರು ತಾಲೂಕು ದಲಿತ ಸೇವಾ ಸಮಿತಿಯ ಮಾಜಿ ಮಹಿಳಾ ಘಟಕದ ಅದ್ಯಕ್ಷರಾದ ಶೋಭಾ, ಜಿಲ್ಲಾ ಉಪಾದ್ಯಕ್ಷ ಆಣ್ಣಿ ಎಳ್ತಿಮಾರ್ , ಸಮಿತಿ ಸದಸ್ಯೆ ಯಾಮಿನಿ, ಉಪಸ್ಥಿತರಿದ್ದರು.-

Related posts

Leave a Reply