Header Ads
Header Ads
Breaking News

ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಬಹಿರಂಗ ಸಭೆ ಮಾಣಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆ

ವಿಟ್ಲ: ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಮಾಣಿ, ಪೆರಾಜೆ ಬರಿಮಾರು, ಕಡೇಶಿವಾಲಯ, ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳ ಶಾಖೆ ರಚನೆ ಮತ್ತು ಬಹಿರಂಗ ಸಭೆಯು ಮಾಣಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಾಖೆಯ ಪದಾಧಿಕಾರಿಗಳಿಗೆ ಅಂಬೇಡ್ಕರ್ ಅವರ ಭಾವಚಿತ್ರ ನೀಡುವ ಮೂಲಕ ಚಾಲನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದಲಿತ್ ಸೇವಾ ಸಮಿತಿ ನಿರಂತರವಾಗಿ ಅನ್ಯಾಯಗೊಳಗಾದವರು ಪರವಾಗಿ ಹೋರಾಟ ನಡೆಸುತ್ತಿದೆ. ಭೂಮಿ ಅತಿಕ್ರಮಣದ ವಿರುದ್ಧ ಡಿಸಿ ಮನ್ನಾ ಜಮೀನಿಗಾಗಿ ಬೀದಿಗಿಳಿದು ಹೋರಾಟ ನಡೆಸಿದೆ.

ರಾಜಕೀಯ ದುರುದ್ದೇಶದಿಂದ ದಲಿತರ ಒಗ್ಗೂಟ್ಟು ಮುರಿಯಲಾಗುತ್ತಿದೆ. ಅಂಬೇಡ್ಕರ್ ಅವರು ಸಮಪಾಲು ಸಮಬಾಳು ಎಂದು ಹೇಳಿದ್ದಾರೆ. ಆದರೆ ಇಂದು ಪ್ರತಿಯೊಬ್ಬರೂ ಅದು ನಮಗೆ ಯಾವುದರಲ್ಲಿ ಸಿಕ್ಕಿದೆ ಎಂಬುದನ್ನು ವಿಮರ್ಶೆ ಮಾಡುವ ಅವಶ್ಯಕತೆ ಇದೆ. ರಾಜಕೀಯ ಪಕ್ಷದವರು ದಲಿತರನ್ನು ಬಲಿಬಶು ಮಾಡುತ್ತಿದ್ದು, ಅವುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಪ್ರಧಾನ ಕಾರ್‍ಯದರ್ಶಿ ಚಂದ್ರಶೇಖರ.ಯು. ವಿಟ್ಲ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರು, ಸಂಚಾಲಕ ಗೋಪಾಲ ನೇರಳಕಟ್ಟೆ, ಪುತ್ತೂರು ದಲಿತ್ ಸೇವಾ ಸಮಿತಿ ಅಧ್ಯಕ್ಷ ರಾಜು ಹೊಸ್ಮಠ, ಬಂಟ್ವಾಳ ದಲಿತ್ ಸೇವಾ ಸಮಿತಿ ಉಪಾಧ್ಯಕ್ಷ ಚೆನ್ನಪ್ಪ ಇರಾ, ಮಹಿಳಾ ಘಟಕ ಅಧ್ಯಕ್ಷೆ ಪ್ರೇಮ ನಾಯ್ಕ ದಡ್ಡಲ್ತಡ್ಕ, ಬಂಟ್ವಾಳ ತಾಲೂಕು ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಅಣ್ಣು ಸಾಧನ್ ಬೆಳ್ತಂಗಡಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಲಾಶ್ರೀ ಪಿಲಿಂಜ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಕೆ ಪ್ರಸಾದ್ ಅನಂತಾಡಿ, ಸುಪ್ರಿತಾ ಪಿಲಿಂಜ ಉಪಸ್ಥಿತರಿದ್ದರು.

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply