Header Ads
Header Ads
Breaking News

ದಲಿತ ಅಹವಾಲು ಸಭೆ

ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ದಲಿತ ಕುಂದುಕೊರತೆ ಸಭೆ ನಡೆಯಿತು. ಡಿಸಿಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆರಳಣಿಕೆಯಷ್ಟೇ ದಲಿತ ಮುಖಂಡರು ಭಾಗವಹಿಸಿದ್ರು.

ಈ ನಡುವೆ ಪೊಲೀಸರು ಕೂಡಾ ಈ ಸಭೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದಂತಿಲ್ಲ ಎಂದು ಮಾತು ಕೇಳಿ ಬಂತು. ಸಭೆಯಲ್ಲಿ ದಲಿತ ಸಂಘಟನೆಯ ಮುಖಂಡ ರಘುವೀರ್ ಮಾತನಾಡಿ, ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಯಾವ್ಯಾವ ಸಮುದಾಯಕ್ಕೆ ಎಷ್ಟೆಷ್ಟು ಸೀಟುಗಳನ್ನು ಮೀಸಲಿಡಲಾಗಿದೆ ಎಂಬುದರ ಫಲಕ ಪಟ್ಟಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಅಳವಡಿಸಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಮಾ ಪ್ರಶಾಂತ್ , ಸಂಬಂಧಪಟ್ಟ ಇಲಾಖಾಧಿಕಾರಿಗಳ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ಸೀಟುಗಳ ಪಟ್ಟಿ ಪ್ರಕಟಿಸಲು ಕ್ರಮ ಜರುಗಿಸಲಾಗುವುದು ಅಂತಾ ತಿಳಿಸಿದ್ರು.

Related posts

Leave a Reply