Header Ads
Header Ads
Header Ads
Breaking News

ದಲಿತ ಬಾಲಕಿಯ ಕೊಲೆ ಪ್ರಕರಣ ಈಗ ಯಾಕೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರತಿಭಟಿಸುತ್ತಿಲ್ಲ ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪದ್ಮನಾಭ ನರಿಂಗಾನ ಹೇಳಿಕೆ

ಚುನಾವಣೆ ಸಂದರ್ಭ ರಾಜ್ಯ ಸರಕಾರದ ಮೇಲೆ ಆರೋಪ ಹೊರಿಸುವ ಉದ್ದೇಶದಿಂದ ಅಮಾಯಕ ದಲಿತ ಯುವತಿಯನ್ನು ಅತ್ಯಾಚಾರಗೈದು ಹತ್ಯೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಪದ್ಮನಾಭ ನರಿಂಗಾನ ಹೇಳಿದ್ದಾರೆ.ದಲಿತ ಬಾಲಕಿಯ ಕೊಲೆ ಪ್ರಕರಣವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಿರುವ ಬಿಜೆಪಿ ನಾಯಕರ ಷಡ್ಯಂತ್ರಗಳ ವಿರುದ್ಧ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕರಾವಳಿ ಭಾಗದ ಅಧ್ಯಕ್ಷ ಯು.ಬಿ.ಸಲೀಂ ಮಾತನಾಡಿ ಮಾತು ಮಾತಿಗೆ ಮಾತೆ, ಸಂಸ್ಕೃತಿ ಅನ್ನುವವರು ಮಾತೆಯರಿಗೆ ಹಲ್ಲೆ ನಡೆಸುತ್ತಾರೆ, ಅತ್ಯಾಚಾರ ನಡೆದಾಗ ಒಂದು ಮಾತನ್ನು ಆಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕಾಂಗ್ರೆಸ್ ವಕ್ತಾರ ಫಾರುಕ್ ಉಳ್ಳಾಲ್, ಮಂಗಳೂರು ವಿಧಾನಸಭಾ ಕ್ಷೇತ್ರ ಯುವಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರವೂಫ್, ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಮುಂತಾದವರು ಹಾಜರಿದ್ದರು.

Related posts

Leave a Reply