Breaking News

ದಲಿತ ಮಹಿಳೆ ಭಾರತದ ಪ್ರಥಮ ಪ್ರಜೆ, ಗಾಂಧೀಜಿ ಕನಸು ನನಸಾಗುವ ಕಾಲ

ದಲಿತ ಮಹಿಳೆಯೊಬ್ಬರು ಭಾರತದ ಮೊದಲ ಪ್ರಥಮ ಪ್ರಜೆ ಆಗಬೇಕು ಎಂದು ಮಹಾತ್ಮ ಗಾಂಧಿ ಬಯಸಿದ್ದರು. ಆದರೆ ಅವರ ಸಲಹೆ ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ರಾಜ್ಮೋಹನ್ ಗಾಂಧಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಗಾಂಧೀಜಿ ೧೯೪೭ರ ಜೂನ್ನಲ್ಲಿ ನಡೆಸಿದ ಎರಡು ಸಂವಾದಗಳು ಮತ್ತು ಭಾಷಣವನ್ನು ಆಧರಿಸಿ ರಾಜ್ಮೋಹನ್ ಈ ಉಲ್ಲೇಖ ಮಾಡಿದ್ದಾರೆ. ಕೆ. ಆರ್. ನಾರಾಯಣ ಅವರ ರೂಪದಲ್ಲಿ ಮೊದಲ ದಲಿತ ರಾಷ್ಟ್ರಪತಿಯನ್ನು ಪಡೆಯಲು ದೇಶ ೧೯೯೭ರವರೆಗೆ ಕಾಯಬೇಕಾಯಿತು ಎಂದು ತಮ್ಮ ‘ವೈ ಗಾಂಧಿ ಸ್ಟಿಲ್ ಮ್ಯಾಟರ್ಸ್: ಆ್ಯನ್ ಅಪ್ರೈಸಲ್ ಆಫ್ ದಿ ಮಹಾತ್ಮಾಸ್ ಲೆಗಸಿ’ ಪುಸ್ತಕದಲ್ಲಿ ರಾಜ್ಮೋಹನ್ ಬರೆದಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ, ಅವರ ಎದುರಾಳಿಯಾಗಿ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರಿ ಅವರನ್ನು ಸ್ಪರ್ಧೆಗಿಳಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ ಎಂಬ ಊಹಾಪೋಹ ಕೇಳಿಬರುತ್ತಿರುವ ಹೊತ್ತಿನಲ್ಲಿ ಈ ಪುಸ್ತಕ ಬಿಡುಗಡೆ ಆಗಿದೆ. ಈ ಇಬ್ಬರೂ ದಲಿತ ಸಮುದಾಯದವರು. ಸೇವಾಗ್ರಾಮ ಆಶ್ರಮದ ಆರಂಭದಿಂದಲೂ ಗಾಂಧೀಜಿ ಜೊತೆಯೇ ಇದ್ದ ಆಂಧ್ರ ಪ್ರದೇಶದ ಪ್ರತಿಭಾನ್ವಿತ ಯುವ ದಲಿತ ಚಕ್ರಯ್ಯ ಅವರ ನಿಧನದಿಂದಾಗಿ, ದಲಿತರನ್ನು ಪ್ರಥಮ ಪ್ರಜೆಯನ್ನಾಗಿ ಆಯ್ಕೆ ಮಾಡುವ ಚಿಂತನೆ ಹುಟ್ಟಿಕೊಂಡಿತ್ತು ಎಂದೂ ಪುಸ್ತಕದಲ್ಲಿ ಹೇಳಲಾಗಿದೆ.

Related posts

Leave a Reply