Header Ads
Header Ads
Breaking News

ದಲಿತ ಸಂಘಟನೆಗಳ ವಿರುದ್ಧ ಸಂಘಪರಿವಾರದಿಂದ ಸುಳ್ಳು ದೂರು. ಭಗವಾಧ್ವಜವನ್ನು ಸುಟ್ಟಿಲ್ಲ, ಮನುಸ್ಮೃತಿಯನ್ನು ಸುಟ್ಟುಹಾಕಲಾಗಿದೆಯಷ್ಟೇ. ಸಂಘಪರಿವಾರದಿಂದ ದಲಿತರ ಮೇಲೆ ಸುಳ್ಳು ಆರೋಪ.

ದೆಹಲಿಯಲ್ಲಿ ಹಿಂದೂಪರ ಸಂಘಟನೆಯೊಂದು ಸಂವಿಧಾನವನ್ನು ಸುಟ್ಟ ಘಟನೆಯನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆಯ ಸಂದರ್ಭ ಭಗವಾಧ್ವಜವನ್ನು ಸುಡಲಾಗಿದೆ ಎಂದು ಸುಳ್ಳು ದೂರು ನೀಡಲಾಗಿದ್ದು, ಇದನ್ನು ಖಂಡಿಸುತ್ತೇವೆ ಎಂದು ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟೀಸ್‌ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾ ತನಾಡಿದ ಅವರು, ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮನುಸ್ಮೃತಿಯನ್ನು ಸುಡಲಾಗಿತ್ತಷ್ಟೇ. ಆದರೆ ಇದನ್ನು ತಿರುಚಿ ಭಗವಾಧ್ವಜವನ್ನು ಸುಡಲಾಗಿದೆ ಎಂದು ಸುಳ್ಳುದೂರು ನೀಡಲಾಗಿದೆ. ದಲಿತರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಷಡ್ಯಂತ್ರ ಸಂಘಪರಿವಾರದಿಂದ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ರಾಜ್ಯಸರ್ಕಾರ ಗಮನಹರಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ರಾಜ ಪಲ್ಲಮಜಲು, ರಾಜೀವ ಕಕ್ಯಪದವು, ಮೋಹನ ಬಡಗಬೆಳ್ಳೂರು, ಚಂದ್ರಶೇಖರ ವೀರಕಂಬ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply