Header Ads
Header Ads
Breaking News

ದಲಿತ ಹಕ್ಕುಗಳ ಸಮಿತಿಯಿಂದ ನಗರ ಸಮಾವೇಶ

ದಲಿತ ಹಕ್ಕುಗಳ ಸಮಿತಿ ವತಿಯಿಂದ ಮಂಗಳೂರು ನಗರ ಸಮಾವೇಶವು ನಗರದ ಎನ್‌ಜಿಒ ಹಾಲ್‌ನಲ್ಲಿ ನಡೆಯಿತು.


ಮಂಗಳೂರು ಮಾಹಾನಗರ ಪಾಲಿಕೆಯು ರದ್ದುಗೊಳಿಸಿರುವ ಎಲ್ಲಾ ಸೌಲಭ್ಯಗಳನ್ನು ಪುನಾರರಂಭಿಸಬೇಕು. ಮನೆ ನಿರ್ಮಾಣದ ಸಹಾಯಧನವನ್ನು ಹೆಚ್ಚಿಸಬೇಕು ಮತ್ತು ದಾಖಲೆಗಳನ್ನು ಸರಳೀಕರಿಸಬೇಕು. ಮನೆ ನಿವೇಶನ ಹಂಚಿಕೆಯಲ್ಲಿ ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಿ ಸಮಾವೇಶ ನಡೆಯಿತು.

ದಲಿತ ಹಕ್ಕುಗಳ ಸಮಿತಿಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಇವತ್ತಿನ ದಿನದಲ್ಲಿ ದಲಿತರ ಮೇಲೆ ಅತ್ಯಾಚಾರಮ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದೆ. ಕೇಂದ್ರ ಸರಕಾರದ ವರದಿಯ ಪ್ರಕಾರ ದಲಿತರ ಮೇಲಿನ ದೌರ್ಜನ್ಯಗಳ ಘಟನೆಗಳ ಪ್ರಮಾಣ ಕಳೆದ ೩ ವರ್ಷದಿಂದ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ತಿಮ್ಮಯ್ಯ ಕೊಂಚಾಡಿ, ಲಿಂಗಪ್ಪ ನಂತೂರು ಉಪಸ್ಥಿತರಿದ್ದರು.

Related posts

Leave a Reply