Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ದಶಮ ಸಂಭ್ರಮದಲ್ಲಿ ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ಕ್ಯಾನ್ಸರ್ ಬಗ್ಗೆ ಒಂದು ದಿನದ ಕಾರ್ಯಾಗಾರ ಫಾದರ್ ಮುಲ್ಲರ್ ಡೆಸಿನಿಯಲ್ ಹಾಲ್‌ನಲ್ಲಿ ಆಯೋಜನೆ

ಮಂಗಳೂರಿನಲ್ಲಿರುವ ಫಾದರ್ ಮುಲ್ಲರ್‌ನ ಒಂಕಾಲಜಿ ಸೆಂಟರ್ ದಶಮ ಸಂಭ್ರಮದಲ್ಲಿದ್ದು ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡರು.

ಫಾದರ್ ಮುಲ್ಲರ್ ಡೆಸಿನಿಯಲ್ ಮೆಮೊರಿಯಲ್ ಹಾಲ್‌ನ ನೋಲೆಡ್ಜ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ನಿಟ್ಟೆ ಯುನಿವರ್‌ಸಿಟಿಯ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ಅರಂಭವಾಗಿ 10 ವರ್ಷವನ್ನು ಪೂರೈಸುತ್ತಿರುವುದು ಹೆಮ್ಮೆಯ ವಿಚಾರ ಎಂದ ಅವರು, ಇಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಅನಂತರ ಯೆನೆಪೋಯ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಒಂಕಾಲಜಿಸ್ಟ್ ಡಾ. ಇಬ್ರಾಹಿಂ ನಗ್‌ನೂರ್ ಕ್ಯಾನ್ಸರ್ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.

ಇದೇ ವೇಳೆ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಷನ್‌ನ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಕೊಯಿಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆವರೆಂಡ್ ಫಾದರ್ ರುಡಾಲ್ಪ್ ರವಿ ಡೇಸಾ, ರೆವರೆಂಡ್ ಫಾದರ್ ಅಜಿತ್ ಮಿನೇಜಸ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಳ್ವ, ಮೆಡಿಕಲ್ ಸಯನ್ಸ್ ಮುಖ್ಯಸ್ಥ ಡಾ. ಸಂಜೀವ್ ರೈ, ಮೆಡಿಕಲ್ ಸೂಪರಿಟೆಂಡೆಂಟ್ ಡ.ಅ ಉದಯ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply