Header Ads
Header Ads
Header Ads
Breaking News

ದಸರಾ ಪ್ರಯುಕ್ತ ರೆಡ್ ಎಫ್.ಎಂನಿಂದ ರೆಡ್ ರಥ ಮಂಗಳೂರಿನಾದ್ಯಂತ ಸಂಚರಿಸಿದ ರೆಡ್ ರಥ

ದಸರಾ ಪ್ರಯುಕ್ತ ರೆಡ್ ಎಫ್ ಎಂ ಆಯೋಜಿಸಿದ್ದ ರೆಡ್ ರಥದ ೮ನೇ ದಿನವಾದ ಇಂದು ಲೇಡಿಹಿಲ್‌ನ ಕಾರ್ಪೋರೇಶನ್ ಬ್ಯಾಂಕ್ ಶಾಖೆಯ ಬಳಿ ರೆಡ್ ರಥ ಆಗಮಿಸಿತು.

ಕಾರ್ಪೋರೇಶನ್ ಬ್ಯಾಂಕ್ ಸಹಯೋಗದಲ್ಲಿ ರೆಡ್ ರಥ ಕಾರ್ಯಕ್ರಮ 10 ದಿನಗಳ ಕಾಲ ನಡೆಯಲಿದೆ.ಕಾರ್ಪೋರೇಶನ್ ಬ್ಯಾಂಕ್ ಕಚೇರಿಯಲ್ಲಿ ದಸರಾ ಪ್ರಯುಕ್ತ ಮಹಾಲಕ್ಷ್ಮೀ ಪೂಜೆ ನಡೆಯಿತು. ಬಳಿಕ ರೆಡ್ ಎಫ್ ರೇಡಿಯೋದ ಸ್ಟುಡಿಯೋ ಮಾದರಿಯ ರಥದಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸಿ.ಕೆ. ಗೋಪಾಲ್ ಮಾತನಾಡಿ,ಇದೊಂದು ಉತ್ತಮ ಕಾರ್ಯಕ್ರಮ ಅಂತಾ ಅವ್ರು ಹೇಳಿದರು.

ಬಳಿಕ ಮಾತನಾಡಿದ ಕಾರ್ಪೋರೇಶನ್ ಬ್ಯಾಂಕ್‌ನ ಮಾರ್ಕೆಟಿಂಗ್ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ವಿಠಲ್ ವಿ ಶೆಣೈ, ದಸರಾ ಪ್ರಯುಕ್ತದ ರೆಡ್ ಎಫ್ ಎಂ ರೆಡ್ ರಥವನ್ನು ಶ್ಲಾಘಿಸಿದರು.

ಆಸ್ಟ್ರಲ್ ಪೈಪ್ ನ ಪ್ರಾಯೋಜಕತ್ವದಲ್ಲಿ , ಕಾರ್ಪೋರೇಶನ್ ಬ್ಯಾಂಕ್ ನ ಸಹಯೋಗ ಹಾಗು ಹೀರೋ ಮೋಟೋ ಕಾರ್ಪ್ ನ ಸಹ ಪ್ರಾಯೋಜಕತ್ವದಲ್ಲಿ ರೆಡ್ ರಥ 5 ನೇ ಬಾರಿಯೂ ಯಶಸ್ವಿಯಾಗಿ ನಡೆದಿದೆ. ವಿ4 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ನಡೆಯುತ್ತಿರುವ ರೆಡ್ ರಥ ಅಭಿಯಾನವು ಮಂಗಳೂರು ಉಡುಪಿ ಮೊದಲಾದೆಡೆ ಸಂಚರಿಸಲಿದೆ.

ಈ ಸಂದರ್ಭದಲ್ಲಿ ಕಾರ್ಪೋರೆಶನ್ ಬ್ಯಾಂಕ್‌ನ ಸರಕಾರಿ ವ್ಯವಹಾರಗಳ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಘವೇಂದ್ರ, ಆರ್. ಜೆ ಗಳಾದ ಪ್ರಸನ್ನ, ನಯನಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply