Header Ads
Header Ads
Breaking News

ದಸರಾ ರಜೆ ಸರ್ಕಾರದ ಸುತ್ತೋಲೆ ಪಾಲಿಸುವಂತೆ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ರಿಂ7ದ 21ರತನಕ ಶಾಲಾ ಮಕ್ಕಳಿಗೆದಸರಾ ರಜೆ ನೀಡುವಂತೆ ಸರ್ಕಾರ ಆದೇಶಿಸಿದ್ದರೂ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕೆಲವು ಶಾಲೆಗಳಲ್ಲಿ ರಜೆ ನೀಡದೇ ಆಡಳಿತ ಮಂಡಳಿಯವರು ಸರ್ಕಾರದ ಅಜ್ಞೆ ಧಿಕ್ಕರಿಸಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆಗಳು ಶೀಘ್ರದಲ್ಲಿ ಸರ್ಕಾರದ ಸುತ್ತೋಲೆ ಪಾಲಿಸಿ ಮಕ್ಕಳಿಗೆ ರಜೆ ನೀಡಬೇಕೆಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.

ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಹಬ್ಬವಾಗಿರುವ ನವರಾತ್ರಿಯ ಉತ್ಸವದಲ್ಲಿ ಮಂಗಳೂರು ದಸರಾ ಎನ್ನುವುದಕ್ಕೆ ವಿಶೇಷವಾದ ಸ್ಥಾನವಿದೆ. ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಸಚಿವರ ಆದೇಶದ ಹೊರತಾಗಿಯೂ ಮಂಗಳೂರು ನಗರ ದಕ್ಷಿಣದ ಕೆಲವು ಶಾಲೆಗಳಲ್ಲಿ ರಜೆಯನ್ನು ಕೊಡದೇ ಆಡಳಿತ ಮಂಡಳಿಯವರು ಸರಕಾರದ ಆಜ್ಞೆಯನ್ನು ದಿಕ್ಕರಿಸುತ್ತಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆಗಳು ಶೀಘ್ರದಲ್ಲಿ ಸರಕಾರದ ಸುತ್ತೋಲೆಯನ್ನು ಪಾಲಿಸಿ ಮಕ್ಕಳಿಗೆ ರಜೆ ನೀಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

Related posts

Leave a Reply