Header Ads
Header Ads
Breaking News

ದಾಂಡೇಲಿಗೆ ವರ್ಗಾವಣೆಗೊಂಡ ವಿಟ್ಲ ಎಸೈ : ಹತ್ತಕ್ಕಿಂತಲೂ ಅಧಿಕ ಸಂಸ್ಥೆ ವತಿಯಿಂದ ಸನ್ಮಾನ

ವಿಟ್ಲ: ವಿಟ್ಲ ಪೊಲೀಸ್ ಠಾಣೆಯಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ವರ್ಗಾವಣೆಗೊಂಡಿರುವ ವಿಟ್ಲ ಎಸೈ ಅವರಿಗೆ ವಿಟ್ಲದ ಸರ್ವಧರ್ಮಿಯರಿಂದ, ವಿವಿಧ ಸಂಘಸಂಸ್ಥೆಗಳಿಂದ ಅಭಿನಂದನೆಗಳ ಸರಮಾಲೆ ಹರಿದು ಬರುತ್ತಿದೆ. ಇದುವರೆಗೂ ಹತ್ತಕ್ಕಿಂತಲೂ ಅಧಿಕ ಸಂಸ್ಥೆ ವತಿಯಿಂದ ಸನ್ಮಾನಿಸಲಾಗಿದೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಸೈ ಯಲ್ಲಪ್ಪ ಅವರು ಹಲವು ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೊಲೀಸ್ ಇಲಾಖೆಯ ಅಧಿಕಾರಿಗಳು ಒಂದು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಸ್ಥಳೀಯ ಜನರಿಂದ ಹಲವು ಆರೋಪಗಳನ್ನು ಎದುರಿಸುವುದು ಸಾಮಾನ್ಯ ಆದರೆ ಯಲ್ಲಪ್ಪ ಅವರ ನಡೆ ವ್ಯತಿರಿಕ್ತವಾಗಿದ್ದು, ಹಲವು ಜನರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ವಿಟ್ಲದ ವರ್ತಕರಿಂದ, ಕಾಶಿಮಠ ಯುವಕ ಮಂಡಲ, ಕೊಡಂಗಾಯಿ ಯುವಕರಿಂದ, ಇದೇ ರೀತಿ 10 ಕ್ಕಿಂತಲೂ ಅಧಿಕ ಮಂದಿ ಠಾಣೆಗೆ ಆಗಮಿಸಿ ಧನ್ಯವಾದ ಸಮರ್ಪಿಸುತ್ತಿರುವುದು ವಿಶೇಷವಾಗಿದೆ.

Related posts

Leave a Reply

Your email address will not be published. Required fields are marked *