Breaking News

ದಾಂಡೇಲಿಯಲ್ಲಿ ರಾಜ್ಯ ಕಾಳಿ ಕಯಾಕಿಂಗ್ ಉತ್ಸವ, ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಸಹಕಾರ


ರಾಜ್ಯವನ್ನು ವಿಶ್ವಮಟ್ಟದಲ್ಲಿ ಸಾಹಸ ಕ್ರೀಡೆಗಳಲ್ಲಿ ಹೆಸರುವಾಸಿ ಮಾಡಲು ರಾಜ್ಯ ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಜೊತೆಗೆ ಜೇತನಾ ಸಂಸ್ಥೆ ಮುಂದಾಗಿದೆ. ಇದರ ಒಂದು ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಕಾಯಾಕಿಂಗ್ ಉತ್ಸವ ಹಮ್ಮಿಕೊಂಡಿದೆ. ಈ ಉತ್ಸವಕ್ಕೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಲಕ್ರೀಡಾ ಸಾಹಸಿಗರು ಭಾಗವಹಿಸಲಿದ್ದಾರೆ.
ರಿವರ್ ರ್‍ಯಾಫ಼್ಟಿಂಗ್ ನೀವು ನೋಡಿರಬಹುದು. ವೇಗವಾಗಿ ಹರಿಯುವ ನೀರಿನಲ್ಲಿ ರ್‍ಯಾಫ಼್ಟಿಂಗ್ ಮಾಡುವಂತದ್ದು. ಈ ತರಹದ ಜಲ ಕ್ರೀಡೆಗಳು ದೇಶದ ಬೆರಳೆಣಿಕೆಯ ಪ್ರದೇಶಗಳಲ್ಲಿ ಮಾಡಲು ಮಾತ್ರ ಅವಕಾಶ ಇರುತ್ತದೆ. ಕೇರಳದ ಮಲಬಾರ್ ನದಿ, ಗಂಗಾ ನದಿ, ಮೇಘಾಲಯ ಮತ್ತಿಲ್ಲಿ ಸುಮಾರು ೧೦ ಕಿ.ಮೀಟರ್‌ನಷ್ಟು ನದಿ ನೀರಿನ ಜಲಕ್ರೀಡೆಗೆ ಅವಕಾಶ ಇರುವ ಪ್ರದೇಶದ ಅಂದ್ರೆ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ಇದೆ. ಇದೇ ಜೂನ್ ೨ರಿಂದ ೪ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ರಿವರ್ ರ್‍ಯಾಫ಼್ಟಿಂಗ್ ಮಾದರಿಯ ಈ ಕ್ರೀಡೆಗೆ ರಾಜ್ಯ, ರಾಷ್ಟ್ರ ಮತ್ತು ವಿದೇಶಿಗರೂ ಭಾಗವಹಿಸಲಿದ್ದಾರೆ. ನೀರು ವೇಗವಾಗಿ ಹರಿಯುವಾಗ ವ್ಯಕ್ತಿಯು ಪೆಡಲ್ ಮೂಲಕ ಮುಂದೆ ಸಾಗುವ ವಿಶಿಷ್ಟ ಕಯಾಕಿಂಗ್ ಜಲ ಕ್ರೀಡೆಗೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದ್ದು ಈ ಮೂಲಕ ರಾಜ್ಯದಲ್ಲಿ ಜಲಕ್ರೀಡೆಗೆ ಉತ್ತೇಜನ ನೀಡುವ ಪ್ರಯತ್ನ ಇದಾಗಿದೆ.
ಜೂನ್ ೨ರಿಂದ ೪ರ ತನಕ ನಡೆಯುವ ಮೊದಲ ಬಾರಿಗೆ ನಡೆಯುವ ಕಯಾಕಿಂಗ್ ಫೆಸ್ಟ್ ಮೂರು ವಿಭಾಗದಲ್ಲಿ ವಿಂಗಡಿಸಲಾಗಿದೆ. ಜಲ ಕ್ರೀಡೆಯ ಸಾಹಸ ಮಾಡಲು ಪ್ರಥಮವಾಗಿ ಬಂದವರು ಅಂದರೆ ಕಲಿಯುತ್ತಿರುವ ಅಭ್ಯರ್ಥಿಗಳಿಗೆ ಒಂದು ವಿಭಾಗ ಆದ್ರೆ ಮನೋರಂಜನೆ ಜೊತೆಗೆ ಆರಂಭಿಕ ಕ್ರೀಡಾಪಟುಗಳ ವಿಭಾಗ ಮತ್ತೊಂದಾಗಿದೆ. ಕೊನೆಯದಾಗಿ ವಿಶ್ವದಾದ್ಯಂತ ಇರುವ ವೃತ್ತಿಪರ ಕಯಾಕರ್ಸ್‌ಗಳಿಗಾಗಿ ವಿಭಾಗ ಮಾಡಿದ್ದು ಇದರಲ್ಲಿ ಅನುಭವಸ್ಥ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಕಯಾಕಿಂಗ್ ಕ್ರೀಡೆಗೆ ದಾಂಡೇಲಿಯ ಕಾಳಿ ನದಿ ಹೇಳಿ ಮಾಡಿಸಿದ ಪ್ರದೇಶವಾಗಿದ್ದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಲಿದೆ ಎಂದು ಮಂತ್ರಿ ಪ್ರಮೋದ್ ಮಧ್ವರಾಜ್ ಹೇಳಿದರು.

Related posts

Leave a Reply