

ದಾಖಲೆಗಳನ್ನು ಫೋರ್ಜರಿ ಮಾಡಿ ವಂಚನೆ ಮಾಡಿರೋ ಆರೋಪದಡಿ ಪ್ರಕರಣವೊಂದು ಕಾಪು ಠಾಣೆಯಲ್ಲಿ ದಾಖಲಾಗಿದೆ. ಉಡುಪಿ ನಿವಾಸಿ ಆಶಾ ಆರ್ ಶೆಟ್ಟಿ ಮತ್ತು ರತ್ನಾಕರ್ ಆರ್ ಶೆಟ್ಟಿ ಯವರಿಗೆ ಸಂಬಂಧಿಸಿದ ಮುಲ್ಕಿ ಬಪ್ಪನಾಡು ಗ್ರಾಮದ ಸರ್ವೇ ನಂಬರ್ 53/14ಪಿ1 ರಲ್ಲಿ 0-97 ಎಕರೆ ಜಮೀನನ್ನು ಅವರ ಮಗ ರಿಶಿತ್ ಶೆಟ್ಟಿ ಎಂಬಾತನ ಮೂಲಕ ಗೋವಿಂದರಾಜ್ ಶೆಟ್ಟಿ ಎಂಬುವವರು ಖರೀದಿಸುವ ಬಗ್ಗೆ ದಿನಾಂಕ 15-05-2013 ರಂದು ಕರಾರನ್ನು ಮಾಡಿಕೊಂಡಿದ್ದರು. ಈ ಬಗ್ಗೆ 2018 ರಲ್ಲಿ ಸದ್ರಿ ಕರಾರಿನಂತೆ ಸ್ಥಿರ ಆಸ್ತಿಯು ಭೂ ನ್ಯಾಯಮಂಡಳಿ ಆದೇಶದಂತೆ ಕ್ರಯ ಪತ್ರ ಮಾಡಿಕೊಡಲು ಕಾಲಾವಕಾಶ ಇದ್ದು ಸದ್ರಿ ಭೂ ನ್ಯಾಯ ಮಂಡಳಿ ಆದೇಶದಂತೆ ಮಾರಾಟ ನಿರ್ಬಂಧದ ಕಾಲಾವಕಾಶ ಮುಗಿದ ನಂತರ ಗೋವಿಂದರಾಜ್ ಶೆಟ್ಟಿ ಹೆಸರಿಗೆ ಕ್ರಯ ಪತ್ರ ಮಾಡಲು ಕರಾರು ಮೂಲಕ ಮಾತುಕತೆ ನಡೆದಿತ್ತು. ಆದರೆ ಆಶಾ ಶೆಟ್ಟಿ ದಂಪತಿಗಳು ಮತ್ತು ಇವರ ಮಗ ರಿಶಿತ್ ಶೆಟ್ಟಿ ಸೇರಿಕೊಂಡು ಕರಾರು ಮಾಡಿಕೊಂಡು ಹಣ ಕ್ರಯಕ್ಕೆ ಸಂಬಂಧಪಟ್ಟಂತೆ ಹಣ ನೀಡಿದ ಗೋವಿಂದರಾಜ್ ಶೆಟ್ಟಿಗೆ ಮೋಸ ಮಾಡಿ ಇನ್ನೊಬ್ಬರಿಗೆ ಆಸ್ತಿಯನ್ನು ಸೇಲ್ ಮಾಡಿದ್ದಾರೆ ಎಂದು ಗೋವಿಂದರಾಜ್ ಶೆಟ್ಟಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನ್ಯಾಯವಾಗಿ ಜಮೀನನ್ನು ನನ್ನ ಹೆಸರಿಗೆ ಕರಾರು ಪತ್ರಗಳನ್ನು ಮಾಡಬೇಕಾಗಿದ್ದು. ನನಗೆ ರಿಶಿತ್ ಮತ್ತು ಅವರ ತಂದೆ ತಾಯಿ ಸೇರಿಕೊಂಡು ಮೋಸ ವಂಚನೆ ಮಾಡಿ ನನ್ನ ಅನುಮತಿ ಇಲ್ಲದೆ ನನ್ನ ಸಹಿಯನ್ನು ಫೆÇೀರ್ಜರಿ ಮಾಡಿ ನಕಲಿ ಹೆಬ್ಬೆಟ್ಟು ಗುರುತನ್ನು ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಕರಾರಿನಂತೆ ನಾನು ನೀಡಿದ ಹಣವನ್ನು ಹಿಂದಿರುಗಿಸದೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ನನಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಗೋವಿಂದರಾಜ ಶೆಟ್ಟಿ ಆರೋಪಿಸಿದ್ದಾರೆ.