Header Ads
Header Ads
Breaking News

ದಾರಿಯಲ್ಲಿ ಸಿಕ್ಕಿದ ಚಿನ್ನ ಪೊಲೀಸರಿಗೊಪ್ಪಿಸಿದ ರಿಕ್ಷಾ ಚಾಲಕ 115 ಪವನ್ ತೂಕದ ಚಿನ್ನದ ಆಭರಣಗಳು ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಉಳ್ಳಾಲ: ರಸ್ತೆಯಲ್ಲಿ ಸಿಕ್ಕಿದ 115 ಗ್ರಾಂ ತೂಕದ ಚಿನ್ನದ ಸರವನ್ನು ರಿಕ್ಷಾ ಚಾಲಕರೊಬ್ಬರು ಉಳ್ಳಾಲ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತನ ಮೆರೆದ ಪ್ರಸಂಗ ಸೋಮವಾರ ಉಳ್ಳಾಲದಲ್ಲಿ ನಡೆದಿದೆ.ಮುಕ್ಕಚ್ಚೇರಿ ನಿವಾಸಿ ಸೈಯದ್ ಸಂಶೀರ್ ಎಂಬವರು ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ.

ರಿಕ್ಷಾದಲ್ಲಿ ಹೋಗುವ ಸಂದರ್ಭ ರಸ್ತೆ ಬದಿಯಲ್ಲಿ ಚಿನ್ನವಿದ್ದ ಬಾಕ್ಸ್ ಪತ್ತೆಯಾಗಿದೆ. ಅದನ್ನು ತೆರೆದು ನೋಡಿದ ಸಂದರ್ಭ 115ತೂಕದ ಚಿನ್ನದ ಸರ ಮತ್ತು ಕಿವಿಯೋಲೆ ಪತ್ತೆಯಾಗಿದೆ. ಕೂಡಲೇ ಚಾಲಕ ಅದನ್ನು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಹಸ್ತಾಂತರಿಸಿದ್ದಾರೆ. ಪೊಲೀಸರು ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಚಿನ್ನ ಕಳೆದುಕೊಂಡವರ ಪತ್ತೆಕಾರ್ಯ ಮುಂದುವರಿಸಿದ್ದಾರೆ.
ವರದಿ: ಆರೀಪ್ ಉಳ್ಳಾಲ

Related posts

Leave a Reply