Header Ads
Breaking News

ದಾರುನ್ನಜಾತ್ ಎಜ್ಯುಕೇಶನ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಇಫ್ತಾರ್ ಕೂಟ

ಮಂಜೇಶ್ವರ : ದಾರುನ್ನಜಾತ್ ಎಜ್ಯುಕೇಶನ್ ಸೇಂಟರ್ ಚಿನಾಳ ಚಿಗುರುಪಾದೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ಅಬ್ದುಲ್ ಖಾದರ್ ಸಖಾಫಿಯವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಂಘಟನೆಗಳ ಹಾಗು ಉದಾರ ದಾನಿಗಳ ಸಹಾಯದಿಂದ ಈ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳು ಪೂರ್ತಿಯಾಗಿ ರಂಜಾನ್ ತಿಂಗಳಿನಲ್ಲಿ ಈ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಷವೂ ಉಚಿತವಾದ ಆಹಾರಗಳನ್ನು ನೀಡಲಾಗುತ್ತದೆ. ಈ ವಿದ್ಯಾಭ್ಯಾಸ ಕೇಂದ್ರದಲ್ಲಿ ನಲ್ವತ್ತೈದು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ . ಬೌತಿಕ ವಿದ್ಯಾಭ್ಯಾಸದ ಜೊತೆಯಾಗಿ ಇಸ್ಲಾಂ ಪಠಣವು ನಡೆಯುತ್ತಿದೆ . ಉಪವಾಸ ವೃತ ಆಚರಿಸಲು ಮುಂಜಾನೆ ವೇಳೆಯ ಆಹಾರವನ್ನು ಕೂಡಾ ಇಲ್ಲಿ ಉಚಿತವಾಗಿ ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾವನ್ನು ನೀಡಲಾಗುತ್ತದೆ. ಈ ಸಂದರ್ಭ ಹುಸೈನ್ ಮುಸ್ಲಿಯಾರ್ ಹಾಗೂ ಅನ್ಸಾರ್ ಸಹಾದಿ ಕೆ ಸಿ ರೋಡ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ರು.

Related posts

Leave a Reply

Your email address will not be published. Required fields are marked *