Header Ads
Breaking News

ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ : ಕಾಂತಪುರಂ ಎ.ಪಿ ಉಸ್ತಾದ್ ಅವರಿಂದ ಉದ್ಘಾಟನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರ-ಮೀಂಜ ಆಸುಪಾಸಿನ ಜನರಿಗೆ ಆಶಾಕಿರಣವಾಗಿ ಸ್ಥಾಪಿಸಲ್ಪಟ್ಟ ಅಸಾಸುದ್ದೀನ್ ಇಸ್ಲಾಮಿಕ್ ಎಜ್ಯುಕೇಶನ್ ಸೆಂಟರ್ ಪರಂದರಕುಝಿ ಇದರ ಅಧೀನದಲ್ಲಿರುವ ದಾರುಲ್ ಖೈರ್ ಭವಣ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಾಲ್ಕು ಮದ್ರಸಗಳ ಲೋಕಾರ್ಪಣೆಯನ್ನು ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕ್ಕರ್ ಉಸ್ತಾದ್ ರವರು ನೆರವೇರಿಸಿದರು.

ಬಳಿಕ ಸಂಸ್ಥೆಯ ಉತ್ತಮ ಚಟುವಟಿಕೆಗಳಿಗೆ ಸಂತೋಷವನ್ನು ವ್ಯಕ್ತಪಡಿಸಿದ ಎ ಪಿ ಉಸ್ತಾದ್ ರವರು ಸಂಸ್ಥೆಯು ಇನ್ನು ಎತ್ತರಕ್ಕೆ ಬೆಳೆದು ಬಡವರ ಅಶಾ ಕಿರಣವಾದ ಅಸಾಸುದ್ದೀನ್ ಸಂಸ್ಥೆ ಯ ಎಲ್ಲಾ ಕಾರ್ಯಕರ್ತರಿಗೂ ಪರಮ ಕಾರುಣಿಗನಾದ ಅಲ್ಲಾವು ಇನ್ನಷ್ಟು ತೌಫೀಕನ್ನು ಅನುಗ್ರಹಿಸಲಿ ಎಂದು ಆಶೀರ್ವದಿಸಿ ಪ್ರಾರ್ಥನೆಗೈದರು.

ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸಗೊಳಿಸಿದ ಬಳಿಕ ಸಂತಡ್ಕ, ಪುಲ್ಲರಕಟ್ಟ ಹಾಗೂ ಬೆಜ್ಜಂಗಳ ಮದ್ರಸಗಳನ್ನು ಉಸ್ತಾದ್ ರವರು ಲೋಕಾರ್ಪಣೆಗೈದರು.

ಈ ಸಂದರ್ಭ ಸಂಸ್ಥೆಯ ರೂವಾರಿ ಹಾಗೂ ಅಧ್ಯಕ್ಷರಾಗಿರುವ ಹಾರಿಸ್ ಹನೀಫಿ ಬಾಳಿಯೂರು ರವರು ಮಾತನಾಡಿಈ ಪ್ರದೇಶದಲ್ಲಿನ ಮೂಲಭೂತಸೌಲಭ್ಯಗಳ ಅಲಭ್ಯತೆಯಿಂದ ಧಾರ್ಮಿಕ ಲೌಕಿಕ ಶಿಕ್ಷಣದಿಂದ ವಂಚಿತರಾದವರಿಗೆ ಉತ್ತಮ ಶಿಕ್ಷಣ ನೀಡಿ ಇಹ ಪರ ಜೀವನದಲ್ಲಿ ವಿಜಯಿಗಳಾಗಬೇಕೆಂಬ ದೂರದೃಷ್ಟಿಯನ್ನಿಟ್ಟುಕೊಂಡು ಆರ್ಥಿಕವಾಗಿ ಹಿಂದುಳಿದವರಿಗೆ ಜಾತಿ ಮತ ಬೇಧವಿಲ್ಲದೆ ಸಹಕಾರವನ್ನು ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಿರುವುದಾಗಿ ಅವರು ಹೇಳಿದರು.

ಬಳಿಕ ಸಂಸ್ಥೆಯ ಕಾರ್ಯದರ್ಶಿ ಮಜೀದ್ ಕೆಜಿಎನ್ ರವರು ಮಾತನಾಡಿ  ಮೀಂಜ, ಉಪ್ಪಳ, ಮಂಜೇಶ್ವರ, ವರ್ಕಾಡಿ ಮೊದಲಾದ ಪ್ರದೇಶಗಳಲ್ಲಿನ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ನಮ್ಮ ಸಂಸ್ಥೆಯಿಂದಾಗುವ ಸಹಾಯವನ್ನು ನಾವು ನೀಡುತ್ತಾ ಬಂದಿದ್ದೇವೆ. ಜೊತೆಯಾಗಿ ನಿರ್ಗತಿಕ ಕುಟುಂಬಗಳಿಗೆ ಜಾತಿ ಬೇಧವಿಲ್ಲದೆ ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದ್ದೇವೆ, ರಮಳಾನ್ ಕಿಟ್, ಈದ್ ಕಿಟ್, ನಿರ್ಗತಿಕ ಕುಟುಂಬಗಳ ಹೆಣ್ಮಕ್ಕಳ ವಿವಾಹ, ಭವಣ ನಿರ್ಮಾಣ, ರೋಗಿಗಳಿಗೆ ಚಿಕಿತ್ಸೆ, ಕುಡಿಯುವ ನೀರು ಸರಬರಾಜು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನಾವು ಎಲ್ಲಾ ವರ್ಷವೂ ನಡೆಸಿಕೊಂಡು ಬರುತ್ತಿರುವುದಾಗಿ ಅವರು ಹೇಳಿದರು.

ಈ ಸಂದರ್ಭ ಸಿದ್ದೀಖ್ ಕೋಳಿಯೂರು, ಆಶಿಕ್ ಸಖಾಫಿ, ಹನೀಸ್ ಸಖಾಫಿ, ಮುಕ್ರಿ ಬಶೀರ್ ಹಾಜಿ, ಮುಸ್ತಾಕ್ ಹಾಜಿ, ಅಬ್ಬಾಸ್ ಕುಳಬೈಲು, ತೋಕೆ ಮೊಹಮ್ಮದ್ ಸಖಾಫಿ ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡರು.

ಅಸಾಸುದ್ದೀನ್ ಸಂಸ್ಥೆಯ ಅಧೀನದಲ್ಲಿ ಇದೀಗ ಮೂರು ಪ್ರದೆಶಗಳಲ್ಲಿ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಕಟ್ಟಡ ಕಾಮಗಾರಿ ಪೈಕಿ ಪುಲ್ಲರ ಕಟ್ಟೆಯಲ್ಲಿ ಮಾತ್ರ ಪೂರ್ತಿಯಾಗಿದ್ದು, ಉಳಿದ ಭಾಗಗಳಲ್ಲಿ ಸ್ಥಳ ಹಾಗೂ ಕಟ್ಟಡಗಳ ಕೊರತೆಯಿಂದ ಒಂದೇ ಕಟ್ಟಡದಲ್ಲಿ ಇದೀಗ ನಮಾಜ್ ಹಾಗೂ ವಿದ್ಯಾರ್ಥಿಗಳ ಮದ್ರಸ ಕಲಿಕೆ ಕೂಡಾ ನಡೆಸಬೇಕಾದ ಅವಸ್ಥೆ ಇದೆ. ಊರ ಪರವೂರ ದಾನಿಗಳ ಸಹಾಯದಿಂದ ಮಾತ್ರ ಈ ಸಂಸ್ಥೆ ಇದೀಗ ನಡೆಯುತಿದ್ದು, ಸಂಸ್ಥೆಗೆ ಸಹಕಾರಿಯಾದ ಎಲ್ಲರಿಗೂ ಸಂಸ್ಥೆ ಕೃತಜ್ಞತೆಯನ್ನು ಸಲ್ಲಿಸಿ ಮುಂದಕ್ಕೂ ಸಹಕಾರವನ್ನು ಕೋರಿಕೊಂಡಿದೆ.

Related posts

Leave a Reply

Your email address will not be published. Required fields are marked *