Header Ads
Breaking News

ದಾರುಸ್ಸಲಾಂ ಪ್ರೀ ಸ್ಕೂಲ್ ಉದ್ಘಾಟನೆ

ಮಂಜೇಶ್ವರದ ಕುಂಜತ್ತೂರಿನಲ್ಲಿ ಕಳೆದ 14 ವರ್ಷಕ್ಕೆ ಮೊದಲು ಸ್ಥಾಪಿತಗೊಂಡ ದಾರುಸ್ಸಲಾಂ ಸಲಫಿ ಜುಮಾ ಮಸೀದಿ ಹಾಗೂ ಮದ್ರಸ ಸೊಸೈಟಿಯ ಅಧೀನದಲ್ಲಿ ಹಾಗೂ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಹೆಸರಾಂತ ದಾರುಲ್ ಐಮನ್ ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮಸೀದಿ ಕಟ್ಟಡದಲ್ಲೇ ಸುಸಜ್ಜಿತವಾದ ದಾರುಸ್ಸಲಾಂ ಪ್ರೀ ಸ್ಕೂಲ್ ಉದ್ಘಾಟನೆಗೊಂಡಿತು.ಮಸೀದಿ ಸಭಾಂಗಣದಲ್ಲಿ ಮಂಜೇಶ್ವರ ಗ್ರಾ. ಪಂ. ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರು ರಿಬ್ಬನ್ ಕತ್ತರಿಸಿ ಪ್ರೀ ಸ್ಕೂಲ್ ಕೊಠಡಿಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜಗತ್ತಿನಲ್ಲಿ ವಿದ್ಯಾಭ್ಯಾಸಕೆ ಅತೀ ಹೆಚ್ಚಿನ ಮಹತ್ವವನ್ನು ನೀಡಿದ ಧರ್ಮವಾಗಿದೆ ಇಸ್ಲಾಂ ಧರ್ಮ. ಬೌತಿಕ ಶಿಕ್ಷಣದೊಂದಿಗೆ ಇಸ್ಲಾಂ ನ ಅರಿವು ಕೂಡಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನೂತನವಾಗಿ ಆರಂಭಗೊಂಡ ದಾರುಸ್ಸಲಾಂ ಫ್ರೀ ಸ್ಕೂಲ್ ಉತ್ತಮ ಹಾದಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
 ಬಳಿಕ ಮುಖ್ಯ ಅಥಿತಿಯಾಗಿ ಆಗಮಿಸಿದ ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮಾತನಾಡಿ, ಸಣ್ಣ ಪ್ರಾಯದಲ್ಲೇ ಇಸ್ಲಾಂ ವಿದ್ಯಾಭ್ಯಾಸದೊಂದಿಗೆ ಬೌತಿಕ ಶಿಕ್ಷಣವನ್ನು ನೀಡಿ ಮಕ್ಕಳನ್ನು ವಿದ್ಯಾಬ್ಯಾಸದತ್ತ ಆಕರ್ಷಣೆಯಾಗುವಂತಹ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಿರುವ ಧಾರುಸ್ಸಲಾಂ ಸೊಸೈಟಿ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಬಳಿಕ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.ವೇದಿಕೆಯಲ್ಲಿ ದಾರುಸ್ಸಲಾಂ ಸಲಫಿ ಮಸೀದಿ ಅಧ್ಯಕ್ಷ ಕೆ ಎಚ್ ಅಬೂಬಕ್ಕರ್, ಕಾರ್ಯದರ್ಶಿ ನೌಶಾದ್ ಅಬೂಬಕ್ಕರ್, ಕೋಶಾಧಿಕಾರಿ ರಜಾಕ್ , ಮೊಯಿದೀನ್ ಹುಸೈನ್, ಅಸ್ಕರ್ ಆಹ್ಮದ್ ಮೊದಲಾದವರು ಉಪಸ್ಥರಿದ್ದರು. ಮಾಜಿ ಪಂ. ಅಧ್ಯಕ್ಷ ಯು ಎ ಖಾದರ್ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರು ಪುರುಷರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 

Related posts

Leave a Reply