Header Ads
Header Ads
Breaking News

ದಿ|ಆರ್.ಆರ್.ಪೈ ಸ್ಮರಣಾರ್ಥ 42ನೇ ಯು.ಎಫ್.ಸಿ.ಎ ಟ್ರೋಫಿ

ಮಂಗಳೂರಿನ ಉರ್ವ ಫ್ರೆಂಡ್ಸ್ ಕಲ್ಚರಲ್ ಎಸೋಸಿಯೇಶನ್ ರಿಜಿಸ್ಟರ್ ವತಿಯಿಂದ ದಿವಂಗತ ಆರ್.ಆರ್. ಪೈ ಸ್ಮರಣಾರ್ಥ ೪೨ನೇ ಯು.ಎಫ್.ಸಿ.ಎ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು, ನಗರದ ಉರ್ವ ಮೈದಾನದಲ್ಲಿ ನಡೆಯುವ ಪಂದ್ಯಾಟದಲ್ಲಿ 32 ಆರ್ಹತಾ ತಂಡ ಹಾಗೂ ೩೨ ಆಯ್ದು ತಂಡಗಳು ಭಾಗವಹಿಸಿದೆ.


ಕಳೆದ ಹಲವಾರು ವರುಷಗಳಿಂದ ಪಂದ್ಯಾಟವನ್ನು ನಡೆಸುತ್ತಾ ಬಂದಿರುವ ಉರ್ವ ಫ್ರೆಂಡ್ಸ್ ಕಲ್ಚರಲ್ ಎಸೋಸಿಯೇಶನ್ ರಿಜಿಸ್ಟರ್ ಇದೀಗ ಮತ್ತೊಮ್ಮೆ ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಿದೆ. ನಗರದ ಉರ್ವ ಮೈದಾನದಲ್ಲಿ ದಿವಂಗತ ಆರ್.ಆರ್. ಪೈ ಸ್ಮರಣಾರ್ಥ ೪೨ನೇ ಯು.ಎಫ್.ಸಿ.ಎ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಂಡು, ಇಂದು ಅದ್ಧೂರಿಯಾಗಿ ಚಾಲನೆ ದೊರಕಿತ್ತು. ಮಾಜಿ ಕ್ರಿಕೆಟ್ ಆಟಗಾರರಾದ ಪ್ರವೀಣ್‌ಚಂದ್ರ ಕರ್ಕೇರ ಅವರು ಬೆಲೂನ್ ಹಾರಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು, ಇದು ಅತ್ಯುತ್ತಮ ಟೂರ್ನಮೆಂಟ್ ಆಗಿದೆ. ಮಾತ್ರವಲ್ಲದೇ ೩೦ ಓವರ್ ಗಳ ಪಂದ್ಯಾಟ ನಡೆಯುತ್ತಿರುವ ಹೆಮ್ಮೆ ವಿಚಾರವಾಗಿದೆ ಅಂತಾ ಹೇಳಿದರು.

ಇನ್ನು ಮುಖ್ಯ ಅತಿಥಿಯಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಟೌನ್ ಪ್ಲಾನಿಂಗ್ ಆಫೀಸರ್ ಗುರು ಪ್ರಸಾದ್ ಭಾಗವಹಿಸಿದ್ರು. ಈ ವೇಳೆ ಅವರು ಪಂದ್ಯಾಟಕ್ಕೆ ಶುಭಾ ಹಾರೈಸಿದರು.

ಇದೇ ಸಂದರ್ಭದಲ್ಲಿ ದಿವಂಗತ ಆರ್.ಆರ್. ಪೈ ಸ್ಮರಣಾರ್ಥ 42ನೇ ಯು.ಎಫ್.ಸಿ.ಎ ಟ್ರೋಫಿಯನ್ನು ಗಣ್ಯರು ಅನಾವರಣಗೊಳಿಸಿದರು.ಈ ವೇಳೆ ಸ್ಥಳೀಯ ಕಾರ್ಪೋರೇಟರ್ ರಾಧಾಕೃಷ್ಣ, ಉರ್ವ ಫ್ರೆಂಡ್ಸ್ ಕಲ್ಚರಲ್ ಎಸೋಸಿಯೇಶನ್ ರಿಜಿಸ್ಟರ್ ಅಧ್ಯಕ್ಷ ವಿಠೋಬ ಸುಲಿಪಾಡೀ, ಗೌರವಾಧ್ಯಕ್ಷರಾದ ಬಿ.ಜಿ.ಸುವರ್ಣ,ರಿಚರ್ಡ್ ಡಿಮೆಲ್ಲೋ,ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುದರ್ಶನ್ ಅವರು ನಿರೂಪಿಸಿದರು. ಜನವರಿ ೧೩ರಿಂದ ಫೆಬ್ರವರಿ೧೦ರತನಕ ಪಂದ್ಯಾಟದಲ್ಲಿ 32 ಆರ್ಹತಾ ತಂಡ ಹಾಗೂ 32 ಆಯ್ದು ತಂಡಗಳು ಭಾಗವಹಿಸಿದೆ. ಇನ್ನು ಫೈನಲ್ ಪಂದ್ಯಾಟವೂ ಫೆಬ್ರವರಿ ೧೭ರಂದು ಜರುಗಲಿದೆ. 30 ಓವರ್ ಪಂದ್ಯಾಟವನ್ನು ನಡೆಸುವ ಮೂಲಕ ನಗರದಲ್ಲಿಯೇ ಉರ್ವ ಫ್ರೆಂಡ್ಸ್ ಕಲ್ಚರಲ್ ಎಸೋಸಿಯೇಶನ್ ರಿಜಿಸ್ಟರ್ ಏಕೈಕ ಕ್ಲಬ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

Related posts

Leave a Reply