Header Ads
Header Ads
Breaking News

ದಿಕ್ಕಿಲ್ಲ…ದೆಸೆಯಿಲ್ಲ.. ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ…! ಇದು ಪುತ್ತಿಗೆ ನೆಲ್ಲಿಗುಡ್ಡೆಯ ಕುಟುಂಬದ ಚಿಂತಾಜನಕ ಕಥೆ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಅಪ್ಪಿ ಪೂಜಾರ್‍ತಿ ಕುಟುಂಬ

ಮೂಡುಬಿದಿರೆ : ನೂರಾರು ಕನಸುಗಳೊಂದಿಗೆ ಮನೆಯ ಜವಾಬ್ದಾರಿ ಹೊತ್ತು ಮನೆ-ಮನ ಬೆಳಗಬೇಕಾಗಿದ್ದ ಆ ಮನೆಯ ಎರಡು ದೀಪಗಳು ಮಂಕಾಗಿದೆ. ಮನೆಯ ಯಜಮಾನಿ ಎನಿಸಿಕೊಂಡಿರುವ ಆ ಹೆತ್ತಬ್ಬೆಗೆ ಕಣ್ಣಿರೊಂದು ಬಿಟ್ಟರೆ ಬೇರೇನೂ ತೋಚುತ್ತಿಲ್ಲ. ಮನೆಗೆ ಆಧಾರವಾಗಬೇಕಿದ್ದ ದುಡಿಯುವ ಕೈಗಳು ಹಾಸಿಗೆ ಸೇರಿ ಇದೀಗ ಬೇರೆಯವರ ಸಹಾಯ ಹಸ್ತದ ನೀರೀಕ್ಷೆಯಲ್ಲಿರುವಂತಾಗಿದೆ.

ಇಂತಹ ಚಿಂತಾಜನಕ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿರುವುದು ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಅಪ್ಪಿ ಪೂಜಾರ್‍ತಿಯವರ ಕುಟುಂಬ. ನಾಲ್ಕು ಜನ ಮಕ್ಕಳಲ್ಲಿ ಇಬ್ಬರು ಪುತ್ರರು ಮತ್ತು ಪುತ್ರಿಯರೊಂದಿಗೆ ಜೀವನ ಸಾಗಿಸುತ್ತಿದ್ದ ಅಪ್ಪಿ ಅವರ ಓರ್ವ ಪುತ್ರ ವಿಶ್ವನಾಥ ಕಳೆದ 15 ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ತುತ್ತಾಗಿ ಹಾಸಿಗೆ ಸೇರಿದ್ದ. ಅಂದಿನಿಂದಲೇ ಚಿಂತಾಗ್ರಾಂತರಾಗಿದ್ದ ಕುಳಿತಿದ್ದ ಆ ಬಡ ಜೀವಕ್ಕೆ, ಇದೀಗ ದುಡಿದು ಮನೆಗೆ ಆಧಾರವಾಗಿದ್ದ ಇನ್ನೋರ್ವ ಪುತ್ರ 41ರ ಹರೆಯದ ಭಾಸ್ಕರ ಪೂಜಾರಿ ಮಾರಕ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿಯುವ ಮೂಲಕ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಸಹೋದರಿಯರಿರ್ವರಿಗೂ ಮದುವೆ ಮಾಡಿಸಿಕೊಟ್ಟಿರುವ ಭಾಸ್ಕರ್ ಅವರು ಮೊದ ಮೊದಲಿಗೆ ಅನಾರೋಗ್ಯವನ್ನು ಲೆಕ್ಕಿಸದೆ ಯಾರ್‍ಯಾರದೋ ಮನೆ ಬಾಗಿಲನ್ನು ತಟ್ಟಿ ಬೇಡಿ ಕೂಲಿ ಕೆಲಸ ಮಾಡಿ ಮನೆಯವರ ಹೊಟ್ಟೆಯನ್ನು ತುಂಬಿಸಿದ್ದಾರೆ. ಆದರೆ ಕೊನೆಗೆ ನಡೆದಾಡಲೂ ಅಸಾಧ್ಯವಾದಾಗ ವೈದ್ಯರನ್ನು ಸಂಪರ್ಕಿಸಿ ನರ ರೋಗಕ್ಕೆ ಮದ್ದು ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಶ್ರೀಮಂತ ಕಾಯಿಲೆಯಾಗಿರುವ “ಕ್ಯಾನ್ಸರ್” ಎಂಬ ಮಾರಕ ಕಾಯಿಲೆ ಇವರ ದೇಹವನ್ನು ಪ್ರವೇಶಿಸಿದ್ದು ಸದ್ಯ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ.ತಾಯಿ ಅಪ್ಪಿ ಪೂಜಾರ್‍ತಿ ಅವರು ಕಣ್ಣೀರಿಡುತ್ತಾ ತನ್ನಿಬ್ಬರು ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಇವರಿಬ್ಬರ ಚಿಕಿತ್ಸೆಗೆ ಸುಮಾರು ರೂ 10 ಲಕ್ಷದಷ್ಟು ಖರ್ಚಿಗೆ ಬೇಕಾಗಿದೆ ಆದರೆ ಒಂದು ರೂಪಾಯಿಯ ಉತ್ಪತ್ತಿಯೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿಯಲ್ಲಿರುವ ಈ ಕುಟುಂಬವು ಸಂಘ ಸಂಸ್ಥೆಗಳ, ಸಹೃದಯರ ಸಹಾಯಹಸ್ತಕ್ಕಾಗಿ ಕಾದು ಕುಳಿತಿದೆ.

ನೆರವು ನೀಡಲಿಚ್ಛಿಸುವವರು ಭಾಸ್ಕರ್ ಅವರ ಸಹೋದರಿ ಭಾರತಿ ಅವರ ಸಿಂಡ್‌ಕೇಟ್ ಬ್ಯಾಂಕ್‌ನ ಈ ಖಾತೆಗೆ ಹಣವನ್ನು ಕಳುಹಿಸಿಕೊಡಬಹುದು..

ಭಾರತಿ
ಸಿಂಡಿಕೇಟ್ ಬ್ಯಾಂಕ್
ಪುತ್ತಿಗೆ ಬ್ರಾಂಚ್
ಅಕೌಂಟ್ ನಂಬ್ರ-027222406288
ಐಎಫ್‌ಎಸ್‌ಸಿ ಕೋಡ್-ಎಸ್‌ವೈಎನ್‌ಬಿ0000272