Header Ads
Header Ads
Breaking News

ದಿನದ 24ಗಂಟೆಯೂ ಹಾರಾಡುತ್ತಿರುವ ರಾಷ್ಟ್ರಧ್ವಜ. ವಿಟ್ಲದ ಪೆರುವಾಯಿ ಗ್ರಾ.ಪಂ. ಆವರಣದಲ್ಲಿ ಹಾರಾಟ.

ವಿಟ್ಲ: ಸರ್ಕಾರಿ ಕಚೇರಿಯ ಕೆಲಸದ ಸಮಯದಲ್ಲಿ ಮಾತ್ರ ರಾಷ್ಟ್ರ ಧ್ವಜವನ್ನು ಹಾರಾಟ ನಡೆಸಬೇಕೆಂಬ ನಿಯಮವಿದ್ದರೂ ವಿಟ್ಲ ಸಮೀಪದ ಪೆರುವಾಯಿ ಗ್ರಾಮ ಪಂಚಾಯಿತಿ ಆವರಣದಲ್ಲಿ ದಿನದ24 ಗಂಟೆಯೂ ರಾಷ್ಟ್ರಧ್ವಜ ಹಾರಾಡುವ ಮೂಲಕ ನಿಯಮವನ್ನು ಗಾಳಿಗೆ ತೂರಲಾಗಿದೆ.ಭಾರತ ಸರ್ಕಾರ ಕೆಲವು ವರ್ಷಗಳ ಹಿಂದೆ ರಾಷ್ಟ್ರಧ್ವಜವನ್ನು ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ ಅಳವಡಿಸಿ ಸಂಜೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಿತ್ತು. ಈ ಬಗ್ಗೆ ರಾಷ್ಟ್ರದಾದ್ಯಂತ ಅನುಷ್ಠಾನಕ್ಕೆ ತರಲಾಗಿತ್ತು. ಆದರೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ನಿಯಮ ಅನ್ವಯವಾಗಿಲ್ಲ. ಶನಿವಾರ ಬೆಳಿಗ್ಗೆ ಅಳವಡಿಸಲಾದ ಧ್ವಜ ಭಾನುವಾರ ತಡರಾತ್ರಿ ವರೆಗೂ ತೆರವು ಆಗಿಲ್ಲ. ಭಾನುವಾರ ರಜೆ ಇರುವುದರಿಂದ ಇಡೀ ದಿನ ರಾಷ್ಟ್ರ ಧ್ವಜ ಧ್ವಜಕಂಬದಲ್ಲಿ ಹಾಗೆಯೇ ಉಳಿದಿದೆ. ಕಳೆದ ಕೆಲವು ಸಮಯಗಳಿಂದ ಪೆರುವಾಯಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪಂಚಾಯಿತಿ ಅಧಿಕಾರಿಗಳ ಬೇಜಾಬ್ದಾರಿತಕ್ಕೆ ಇದೊಂದು ಉದಾಹರಣೆಯಾಗಿದೆ.

Related posts

Leave a Reply