Header Ads
Header Ads
Breaking News

ದಿನಾ ಮನೆಗೆ ಪೊಲೀಸ್ ದಾಳಿ ನಡೆಸಲು ನನ್ನ ಮಗನೇನು ಉಗ್ರಗಾಮಿಯೇ? ಸತ್ಯಜಿತ್ ಸುರತ್ಕಲ್ ತಾಯಿಯ ಪ್ರಶ್ನೆ

ಮಂಗಳೂರು: ದಿನಾ ಮನೆಗೆ ಪೊಲೀಸ್ ದಾಳಿ ನಡೆಸಲು ನನ್ನ ಮಗನೇನು ಉಗ್ರಗಾಮಿಯೇ ಎಂದು ರಾಜ್ಯ ಬಿಜೆಪಿ ಹಿಂದುಳಿದ ಮೊರ್ಚಾದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್‌ರ ತಾಯಿ ಭಾರತಿ ವಾಸುದೇವ ಪ್ರಶ್ನಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು ೯ ಗಂಟೆಯ ಸುಮಾರಿಗೆ ಪೊಲೀಸರ ತಂಡವೊಂದು ಸತ್ಯಜಿತ್ ಮನೆಗೆ ಬಂದು ಬಾಗಿಲು ತೆರೆಯುವಂತೆ ಸೂಚಿಸಿದ್ದರು. ಯಾಕೆ ಬಾಗಿಲು ತೆರೆಯಬೇಕು ಎಂದು ಸತ್ಯಜಿತ್‌ರ ತಾಯಿ ಭಾರತಿ, ತಂದೆ ವಾಸುದೇವ ಪ್ರಶ್ನಿಸಿದರೆ, ಮನೆ ಸರ್ಚ್ ಮಾಡಲು ಬಂದಿದ್ದೇವೆ ಎಂದು ಪೊಲೀಸರು ಹೇಳಿದ್ದರು.
ಬಾಗಿಲು ತೆರೆಸಿ ಸತ್ಯಜಿತ್ ಎಲ್ಲಿ, ಹುಡುಕಿ ಕೊಡಿ, ಅವರ ಬಂಧನವಾಗುವವರೆಗೂ ನಾವು ನಿತ್ಯ ಮನೆಗೆ ಬರುತ್ತಿರುತ್ತೇವೆ. ಅವರು ಸಿಗುವವರೆಗೂ ನಾವು ಇಲ್ಲಿಯೇ ಕಾಯಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಭಾರತಿ ಮಾಹಿತಿ ನೀಡಿದ್ದಾರೆ.
ಮೊನ್ನೆ ಮುಂಜಾನೆ ೨:೩೦ರ ಹೊತ್ತಿಗೆ ಮನೆಯಲ್ಲಿ ಶೋಧ ನಡೆಸಲಾಗಿದೆ. ನಿನ್ನೆ ಮತ್ತೆ ಬಂದಿದ್ದಾರೆ. ಮನೆಯ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ
ನಿನ್ನೆ ರಾತ್ರಿ ನಾನು ಮನೆಯ ಸಾಮಗ್ರಿ ತರಲು ಅಂಗಡಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ನನ್ನ ಅತ್ತೆ, ಮಾವ ಮತ್ತು ಸಂಬಂಧಿಯೊಬ್ಬರು ಮನೆಯಲ್ಲಿದ್ದರು. ಈ ವೇಳೆ ಪೊಲೀಸರು ಬಾಗಿಲು ಬಡಿದು ಒಳ ಪ್ರವೇಶಿಸಿದ್ದಾರೆ ಎಂದು ಸತ್ಯಜೀತ್ ಸುರತ್ಕಲ್‌ರ ಪತ್ನಿ ಸವಿತಾ ಸತ್ಯಜೀತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೇಟೆಯಲ್ಲಿದ್ದ ನನಗೆ ಪೋನ್ ಕರೆ ಮಾಡಿ ಪೊಲೀಸರು ಮನೆಗೆ ದಾಳಿ ನಡೆಸಿದ್ದಾರೆ ಬೇಗ ಬನ್ನಿ ಎಂದು ಪುತ್ರ ಹೇಳಿದ್ದ. ಎಂದು ಸವಿತಾ ಸತ್ಯಜೀತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಠಂದೂರು ಭೇಟಿ
ಸತ್ಯಜಿತ್ ಸುರತ್ಕಲ್‌ರ ಮನೆಗೆ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮತ್ತು ಪದಾಧಿಕಾರಿಗಳು ನಿನ್ನೆ ಸಂಜೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು.

Related posts

Leave a Reply