Header Ads
Breaking News

ದಿಲ್ಲಿಯಲ್ಲಿ ಕಡಬದ ಯುವಕನ ಅಪಹರಣ ಮೂರು ಲಕ್ಷ ರೂ.ಗೆ ಬೇಡಿಕೆ

ಮಂಗಳೂರು: ಪುತ್ತೂರು ತಾಲೂಕಿನ ಹಳೆ ನೆರಂಕಿ ಗ್ರಾಮದ ಅರಟಿಗೆ ಎಂಬಲ್ಲಿಯ ಯುವಕನೋರ್ವನನ್ನು ದುಷ್ಕರ್ಮಿಗಳು ಅಪಹರಿಸಿದ್ದು ಮೂರು ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಯೊಂದು ಬಂದಿದೆ.
ಅರಟಿಗೆಯ ಕೊರಗಪ್ಪ ಪೂಜಾರಿ ಎಂಬವರ ಪುತ್ರ ಕೃಷ್ಣಪ್ರಸಾದ್ (26)ತನ್ನ ನಾಲ್ವರು ಸ್ನೇಹಿತರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿದ್ದು ಈ ಸಂದರ್ಭದಲ್ಲಿ ನಾಲ್ವರನ್ನೂ ಅಪಹರಿಸಿ ಹಣದ ಬೇಡಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಕೃಷ್ಣಪ್ರಸಾದ್ ನಾಪತ್ತೆಯಾದ ಬಗ್ಗೆ ಅವರ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ರನನ್ನು ಬಿಡಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಲ್ಲಿ ಮೊರೆ ಇಟ್ಟಿದ್ದಾರೆ.
ಕೃಷ್ಣಪ್ರಸಾದ್‌ನ ಜೊತೆ ವಳಾಲಿನ ಅಭಿಲಾಶ್, ಕಲ್ಲಡ್ಕದ ಪ್ರಶಾಂತ್ ದೆಹಲಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಕೃಷ್ಣಪ್ರಸಾದ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಂಜನಿಯರಿಂಗ್ ಮಾಡಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ವಿಪ್ರೋಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹದಿನೈದು ದಿನಗಳ ಹಿಂದೆ ಊರಿಗೆ ಬಂದವನು ಜೂ.18ರಂದು ಬೆಂಗಳೂರಿಗೆ