Header Ads
Header Ads
Breaking News

ದಿವ್ಯಾ ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿಭಟನೆ

ಪುತ್ತೂರು: ಮಧ್ಯಪ್ರದೇಶದ ಮಾಂಡ್ಸೂರ್‌ನಲ್ಲಿ ೭ ವರ್ಷದ ಹಸುಳೆ ದಿವ್ಯಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ಇರ್ಫಾನ್‌ಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮತ್ತು ಕಲ್ಬುರ್ಗಿಯ ವಾಣಿಜ್ಯ ತೆರಿಗೆ ಆಯುಕ್ತ ಇರ್ಷಾದ್ ಉಲ್ ಖಾನ್ ಲವ್ ಜಿಹಾದ್‌ಗೆ ಕುಮ್ಮಕ್ಕು ನೀಡಿರುವ ವಿರುದ್ಧ ಪುತ್ತೂರು ಗಾಂಧಿ ಕಟ್ಟೆಯ ಬಳಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತ್ತಡ್ಕ ಮಧ್ಯಪ್ರದೇಶದಲ್ಲಿ ೭ ವರ್ಷದ ಮುಗ್ಧ ಬಾಲೆಯನ್ನು ಮತಾಂಧ ಇರ್ಫಾನ್ ಅತ್ಯಾಚಾರ ಮಾಡಿ ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದಾನೆ. ಈ ಕುರಿತು ಬುದ್ಧಿಜೀವಿಗಳು, ಎಡಪಂಥೀಯರು ಮಾತನಾಡುತ್ತಿಲ್ಲ. ೩ ತಿಂಗಳ ಹಿಂದೆ ಕಾಶ್ಮೀರದಲ್ಲಿ ಆಸೀಫಾ ಎಂಬ ಕಂದಮ್ಮಳನ್ನು ಅತ್ಯಾಚಾರ ಮಾಡಿರುವ ವಿಚಾರವಾಗಿ ಹಿಂದೂ ಸಮಾಜದ ಮೇಲೆ ಹಣೆಪಟ್ಟಿ ಕಟ್ಟಲು ಎಲ್ಲರೂ ಪ್ರಯತ್ನಿಸಿದ್ದರು. ಆದರೆ ದಿವ್ಯಳ ಕುರಿತು ಈಗ ಎಲ್ಲರೂ ಮೌನ ವಹಿಸಿದ್ದಾರೆ.

ಹಿಂದೂ ಸಮಾಜದ ಮಾನ, ಸಂಸ್ಕೃತಿಯನ್ನು ನಾಶ ಮಾಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಇದಕ್ಕೆಲ್ಲಾ ಸ್ಪಷ್ಠ ಸಂದೇಶ ನೀಡಲು ಈ ಪ್ರತಿಭಟನೆ ನಡೆಯುತ್ತಿದೆ ಎಂದರು.ಪ್ರತಿಭಟನೆಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಪುತ್ತೂರು ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ಹಿಂದೂ ಜಾರಣಾ ವೇದಿಕೆ ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಮಾತೃಮಂಡಳಿಯ ಪ್ರಮುಖರಾದ ಪ್ರೇಮಲತಾ ರಾವ್, ಮೋಹಿನಿ ದಿವಾಕರ್, ಜಯಂತಿ ನಾಯಕ್, ಜ್ಯೋತಿ ನಾಯಕ್, ಅರ್ಪಣಾ ಶಿವಾನಂದ, ಸಂಘಟನೆಗಳ ಪ್ರಮುಖರಾದ ಹರೀಶ್ ದೋಳ್ಪಾಡಿ, ಸುರೇಶ್ ಆಳ್ವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply