Header Ads
Header Ads
Header Ads
Breaking News

ದಿ. ಎಚ್. ನಾರಾಯಣ ಸನಿಲ್ ನೆಂಪು ಹಳೆಯಂಗಡಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ

 

ಎಚ್. ನಾರಾಯಣ ಸನಿಲ್ ನೆಂಪು ಸಮಿತಿ ಹಳೆಯಂಗಡಿ ಇದರ ಆಶ್ರಯದಲ್ಲಿ ಶಿಕ್ಷಣ ಪ್ರೇಮಿ, ದಾರ್ಮಿಕ ನೇತಾರ ದಿ. ಎಚ್. ನಾರಾಯಣ ಸನಿಲ್ ನೆಂಪು ಕಾರ್‍ಯಕ್ರಮದ ಹಳೆಯಂಗಡಿಯ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಭ್ಯಯಚಂದ್ರ ಜೈನ್ ದಿ. ನಾರಾಯಣ ಸನಿಲ್ ಓರ್ವ ಆದರ್ಶನೀಯ ವ್ಯಕ್ತಿಯಾಗಿದ್ದು ಗಾಂಧೀವಾದಿಯಾಗಿದ್ದು ಹಳೆಯಂಗಡಿಯ ಭೀಷ್ಮ ಎಂದೇ ಖ್ಯಾತಿ ಹೊಂದಿದವರು ಸಹಕಾರಿಯಾಗಿ, ಬಹಳ ಸಾಧನೆ ಮಾಡಿದವರು ಅಲ್ಲದೆ ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅವರ ಸಾಧನೆ ಅನುಕರಣೀಯ ಎಂದರು ಇದೇ ಸಂದರ್ಭದಲ್ಲಿ ಲಯನ್ ಚಂದ್ರಶೇಖರ ನಾನಿಲ್ ದಂಪತಿಗಳಿಗೆ ಎಚ್ ನಾರಾಯಣ ಸನಿಲ್ ‘ನೆಂಪುಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷರಾದ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ನೆಂಪು ಸಮಿತಿಯ ಅಧ್ಯಕ್ಷರಾದ ಗಣೇಶ್ ಅಮೀನ್ ಸಂಕಮಾರ್, ಮುಲ್ಕಿವಿಜಯಾ ಕಾಲೇಜು ಪ್ರಾಂಶುಪಾಲ ನಾರಾಯಣ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

ವರದಿ: ನಿಶಾಂತ್ ಮುಲ್ಕಿ

Related posts

Leave a Reply