Header Ads
Breaking News

ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ಶ್ರೀನಿವಾಸ ಇನ್ಸ್‍ಸ್ಟಿಟ್ಯೂಟ್ ಅಫ್ ಟೆಕ್ನೋಲಜಿಯ 4ನೇ ಬ್ಯಾಚಿನ್ ವಿದ್ಯಾರ್ಥಿಗಳು ದಿ ಮೋನೋವೀಲ್ ಎಂಬ ಅಟೋಮೆಶನ್ ಪ್ಯೂಚರಿಸ್ಟಿಕ್ ಬೈಕೊಂದನ್ನು ತಯಾರಿಸಿದ್ದಾರೆ. ಸಹ ಪ್ರಾಧ್ಯಾಪಕರಾದ ಸಂತೋಷ್ ಕುಮಾರ್ ಮತ್ತು ವಿದ್ಯಾರ್ಥಿ ಮೋಹಿತ್ ಮಾಧವ್ ಅವರ ತಂಡ ದಿ ಮೋನೋವೀಲ್ ಎಂಬ ಬೈಕ್‍ನ್ನು ಸಂಶೋಧಿಸಿದ್ದಾರೆ.
ಮಂಗಳೂರಿನ ಶ್ರೀನಿವಾಸ ಗ್ರೂಪ್‍ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೈಕ್‍ನ್ನು ಆವಿಷ್ಕರಿಸಿದ್ದಾರೆ. 4ನೇ ವರ್ಷದ ಅಟೊಮೊಬೈಲ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಆವಿಷ್ಕರಿಸಿದ ಅಟೋಮೆಶನ್ ಪ್ಯೂಚರಿಸ್ಟಿಕ್ ಬೈಕ್ ಒಂದು ವೀಲ್ ಹೊಂದಿದ್ದು, ಡ್ರೈವರ್ ವೀಲ್‍ನ ಒಳಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬೈಕ್‍ನ್ನು ಇಂಡಸ್ಟ್ರೀಯಲ್ ಮತ್ತು ಎಗ್ರಿಕಲ್ಚರಲ್ ಉದ್ದೇಶಕ್ಕಾಗಿ ಬಳಸಬಹುದು ಎಂದು ವಿದ್ಯಾರ್ಥಿ ಮೋಹಿತ್ ಮಾಧವ ಬೈಕ್‍ನ ವಿಶೇಷತೆ ಬಗ್ಗೆ ವಿವರಿಸಿದರು.

ಬೈಕ್ ತಯಾರಿಕೆಯಲ್ಲಿ ಪೃಥ್ವಿ ಆಚಾರ್ಯ, ನವೀನ್ ಅಮರನ್ನವರ್, ಪ್ರಮೋದ್ ಜಿ ಅವರು ಈ ಅತ್ಯಾಧುನಿಕ ಮೋನೊವಿಲ್ ಬೈಕ್‍ನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

Leave a Reply

Your email address will not be published. Required fields are marked *