Header Ads
Header Ads
Breaking News

ಮಂಗಳೂರಿನ ಆಶೋಕ ನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಹರಿಶ್ವಂದ್ರ ರಾವ್ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರ

ಮಂಗಳೂರಿನ ಆಶೋಕ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರವು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್, ಡಿವೈಎಫ್‌ಐ ಉರ್ವಸ್ಟೋರ್ ಘಟಕ ನೇತೃತ್ವದಲ್ಲಿ ನಡೆಯಿತು. ರಕ್ತದಾನದಲ್ಲಿ ಯುವ ಸಮುದಾಯ ಸಾಥ್ ನೀಡಿದ್ದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್, ಡಿವೈಎಫ್‌ಐ ಉರ್ವಸ್ಟೋರ್ ಘಟಕ ನೇತೃತ್ವದಲ್ಲಿ ದಿ. ಹರಿಶ್ವಂದ್ರ ರಾವ್ ಸ್ಮರಣಾರ್ಥ ಎ.ಜೆ. ಆಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅಶೋಕ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು.
ಆನಂತರ ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಇವತ್ತಿನ ದಿನದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಯುವಕರು ಪಾಲ್ಗೊಳ್ಳುವುದರಿಂದ ಮತ್ತು ರಕ್ತದಾನಂತಹ ಅಂದೋಲವನ್ನು ಹಮ್ಮಿಕೊಳ್ಳುವುದರಿಂದ ರಕ್ತದ ಕೊರತೆ ಕಡಿಮೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಎ.ಜೆ. ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮ್ಯಾನೇಜರ್ ಪಿ.ಆರ್ ಗೋಪಾಲಕೃಷ್ಣ ಅವರು ಮಾತನಾಡಿ, ಯುವಜನತೆ ರಕ್ತದಾನ ಮಾಡಿ, ರಕ್ತದಾನ ಮಾಡುವುದರಿಂದ ತಮಗೆ ಬರುವಂತಹ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಈ ಸಂದರ್ಭ ಎ.ಜೆ. ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಅರವಿಂದ್ ಪಿ. ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಅಧ್ಯಕ್ಷರಾದ ಇಕ್ಬಾಲ್, ಕಾರ್ಯದರ್ಶಿ ಧನ್‌ರಾಜ್, ಮನೋಜ್ ಕುಲಾಲ್, ಪ್ರಶಾಂತ್ ಎಂ.ಬಿ. ಮಮತಾ ರಾವ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *