Header Ads
Header Ads
Breaking News

ದೀಪಕ್‌ರಾವ್, ಬಶೀರ್ ಅವರ ಗೌರವಾರ್ಥ ಶ್ರದ್ಧಾಂಜಲಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನಡೆದ ಸಭೆ

ಉಳ್ಳಾಲ: ದೀಪಕ್ ರಾವ್ ಮೃತದೇಹವಿದ್ದ ವಾಹನದ ಮೇಲೆ ನಿಂತು ಭಾಷಣ ಮಾಡುವವರು ಹೆಣದ ಮೇಲೆ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಮಾನವೀಯತೆಯನ್ನು ಕೊಲ್ಲುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ಗಟ್ಟಿಗೊಳಿಸುವ ಪ್ರಯತ್ನ ಜನತೆಯಿಂದ ಆಗಬೇಕಿದೆ ಎಂದು ಡಿವೈ‌ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ.

ಅವರು ಡಿವೈ‌ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ದೀಪಕ ರಾವ್ ಮತ್ತು ಬಶೀರ್ ಅವರ ಗೌರವಾರ್ಥ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೀಪಕ್ ರಾಜ್ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ರಾಜಕೀಯ ಮಾಡಲು ಹೊರಟವರು , ದೀಪಕ್ ಮೃತದೇಹ ಹೊರುತ್ತಿದ್ದ ಆಂಬ್ಯುಲೆನ್ಸ್ ಮೇಲೆ ನಿಂತೇ ಭಾಷಣ ಬಿಗಿಯಲು ಆರಂಭಿಸಿದ್ದರು. ಇದರಿಂದ ಹೆಣದ ಮೇಲೆ ನಿಂತು ರಾಜಕೀಯ ನಡೆಸುವವರ ಮನೋಭಾವ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

ಈ ಸಂದರ್ಭ ಮುಖಂಡರುಗಳಾದ ಕೃಷ್ಣಪ್ಪ ಸಾಲ್ಯನ್, ಜಯಂತ್ ನಾಯ್ಕ್, ಜೀವನರಾಜ್ ಕುತ್ತಾರ್ ಎಸ್ ಎಫ್ ಐ ನಾಯಕ ನಿತಿನ್, ವಿಕಾಸ್, ವಾಸುದೇವ ಉಚ್ಚಿಲ್, ಸುನಿಲ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

Related posts