Header Ads
Header Ads
Breaking News

ದೀಪಕ್ ರಾವ್ ಹತ್ಯೆಗೆ ಖಂಡನೆ ಉಡುಪಿಯಲ್ಲಿ ವಿಹೆಚ್‌ಪಿ ಹಾಗೂ ಭಜರಂಗದಳ ಪ್ರತಿಭಟನೆ

ಕಾಟಿಪಳ್ಳದ ದೀಪಕ್ ರಾವ್ ಹತ್ಯೆಯನ್ನು ಖಂಡಿಸಿ ಹತ್ಯೆ ಹಿಂದಿರುವ ಪಿ‌ಎಫ್ ಐ ಹಾಗೂ ಎಸ್ ಡಿಪಿ‌ಐ ಸಂಘಟನೆಯನ್ನು ರಾಜ್ಯ ಸರ್ಕಾರ ಈ ಕೂಡಲೇ ನಿಷೇದಿಸಬೇಕು ಎಂದು ಆಗ್ರಹಿಸಿ ವಿಹೆಚ್ ಪಿ ಹಾಗೂ ಭಜರಂಗದಳದಿಂದ ನಗರದಲ್ಲಿ ರಾಸ್ತಾರೋಕೋ ನಡೆಯಿತು.

ನಗರದ ಕ್ಲಾಕ್ ಟವರ್ ಸ್ಥಳದಿಂದ ಪ್ರತಿಭಟನಾ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು ತ್ರಿವೇಣಿ ಸರ್ಕಲ್ ಬಳಿ ರಾಸ್ತಾ ರೋಕೋ ನಡೆಸಿದ್ರು. ಪ್ರತಿಭಟನೆಗೆ ಸಾಥ್ ನೀಡಿದ್ದ ಬಿಜೆಪಿ ಮುಖಂಡರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಲೇ ನಗರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್, ಸಿದ್ದರಾಮಯ್ಯ ಕಾಲಿಟ್ಟ ಕಡೆ ಹಾಗೂ ಕಾಂಗ್ರೆಸ್ ಶಾಸಕರಿರುವೆಡೆ ಹಿಂದೂಗಳ ಕೊಲೆಯಾಗುತ್ತಿದೆ. ಮೊಯ್ದಿನ್ ಭಾವ ಶಾಸಕ ಕ್ಷೇತ್ರದಲ್ಲೇ ದೀಪಕ್ ರಾವ್ ಕೊಲೆಯಾಗಿದೆ. ಕೊಲೆಮಾಡಿದ ಯುವಕರು ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ ಇದರಿಂದಲೇ ಕಾಂಗ್ರೆಸ್ ಕೈವಾಡ ಎಷ್ಟರಮಟ್ಟಿಗೆ ಇದೆಯೆಂದು ತಿಳಿಯುತ್ತಿದೆ ಎಂದು ಆರೋಪಿಸಿದ್ರು.

Related posts