Header Ads
Header Ads
Breaking News

ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ. ಅಂತರರಾಷ್ಟ್ರೀಯ ತುಳುವರ ಸಮ್ಮೀಲನ. ನವೆಂಬರ್23 ಮತ್ತು 24ರಂದು ನಡೆಯಲಿರುವ ಸಮ್ಮೇಳನ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ, ಅಂತರರಾಷ್ಟ್ರೀಯ ತುಳುವರ ಸಮ್ಮಿಲನ ನವಂಬರ್ ೨೩ ಮತ್ತು ೨೪ರಂದು ಆಯೋಜಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಮುಖ್ಯ ಸಂಘಟಕರಾದ ಸರ್ವತ್ತೋಮ ಶೆಟ್ಟಿ ಹೇಳಿದರು.ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮ ವಿಭೂಷಣ ಪುರಸ್ಕೃತ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಸಮ್ಮೇಳನದ ಎಲ್ಲಾ ಕಾರ್ಯ ಯೋಜನೆಗಳು ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುತ್ತದೆ ಎಂದು ಹೇಳಿದರು.ಸಮಾರಂಭ ಅಧ್ಯಕ್ಷರಾಗಿ ಅಬುಧಾಬಿ ಎನ್.ಎಮ್.ಸಿ ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್ ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾತಿ ಗಣ್ಯರು ಹಾಗೂ ಸಾಗರದಾಚೆಯ ಗಲ್ಫ್, ಅಮೇರಿಕಾ, ಆಸ್ಟ್ರೇಲಿಯ, ಯು.ಕೆ. ತುಳು ಸಂಘಟನೆಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ ಎಂದರು.ಇದೇ ವೇಳೆ ಸಮಾರಂಭದಲ್ಲಿ ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆ ವಿಶ್ವ ತುಳು ಐಸಿರಿ ಲೋಕಾರ್ಪಣೆಗೊಳ್ಳಲಿದೆ. ವಿದ್ವಾಂಸರಿಂದ ತುಳುನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಜನಪದ, ಸಮಗ್ರ ಮಾಹಿತಿಗಳು, ಸಾಹಿತಿಗಳ ಅರ್ಥಪೂರ್ಣ ಲೇಖನಗಳು ಮತ್ತು ಗಣ್ಯಾತಿ ಗಣ್ಯರ ಶುಭ ಸಂದೇಶಗಳನ್ನು ಈ ಸ್ಮರಣ ಸಂಚಿಕೆ ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.ಈ ಸಂದರ್ಭ ಸುದಿಗೋಷ್ಠಿಯಲ್ಲಿ ಶಶಿಧರ್ ಶೆಟ್ಟಿ, ಧರ್ಮಪಾಲ್ ದೇವಾಡಿಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ, ಕದ್ರಿ ನವನೀತ್ ಶೆಟ್ಟಿ, ಬಿ.ಕೆ ಗಣೇಶ್ ರೈ ಉಪಸ್ಥಿತರಿದ್ದರು.

Related posts

Leave a Reply