Header Ads
Header Ads
Breaking News

ದುಬೈಯ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಗಮ್ಮತ್ ಕಲಾವಿದರ್ ವತಿಯಿಂದ ಬಯ್ಯಮಲ್ಲಿಗೆ ನಾಟಕ ಪ್ರದರ್ಶನ

ದುಬಾಯಿಯ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಗಮ್ಮತ್ ಕಲಾವಿದೆರ್ ವತಿಯಿಂದ ಬಯ್ಯ ಮಲ್ಲಿಗೆ ನಾಟಕವು ಬಹಳ ಅದ್ಧೂರಿಯಾಗಿ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

ಸಭಾ ಕಾರ್ಯಕ್ರಮದ ಮಧ್ಯೆ ನೆರೆದಿದ್ದ ಎಲ್ಲಾ ಆಯೋಜಕರು, ಕಲಾವಿದರು ಹಾಗೂ ಸಭಿಕರು ಎದ್ದು ನಿಂತು ಪುಲ್ವಾಮದಲ್ಲಿ ನಡೆದ ಭೀಕರ ದಾಳಿಗೆ ಹುತಾತ್ಮರಾದ ವೀರ ಸೈನಿಕರ ಆತ್ಮಕ್ಕೆ ಶಾಂತಿ ಕೋರಿದರು.

ಬಯ್ಯ ಮಲ್ಲಿಗೆ ನಾಟಕದ ರಚನೆಕಾರರಾದ ಡಾ| ಸಂಜೀವ ದಂಡೆಕೇರಿ ಹಾಗೂ ಅವರ ಪತ್ನಿ ಜಲಜಾಕ್ಷಿ ಸಂಜೀವ ದಂಡೆಕೇರಿಯವರಿಗೆ ನೆನಪಿನ ಕಾಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.. ಎಲ್ಲಾ ಪ್ರಾಯೋಜಕರು ಹಾಗು ಮಾಧ್ಯಮ ಮಿತ್ರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಾಟಕ ಮತ್ತು ಕಲಾ ರಂಗಕ್ಕೆ ಸೇವೆಯನ್ನು ನೀಡುತ್ತಾ ಬಂದಿರುವ ತಂಡದ ಸ್ಥಾಪಕ ಸದಸ್ಯರಾದ ಶ್ರೀಮತಿ ಜಾನೆಟ್ ಡಿಸಿಲ್ವ ಮತ್ತು ಕಿರಣ್ ಶೆಟ್ಟಿ ಯವರಿಗೆ ನೆನಪಿನ ಕಾಣಿಕೆ ಹಾಗು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು .. ಸನ್ಮಾನ ಪತ್ರವನ್ನು ಸಂಪತ್ ಶೆಟ್ಟಿಯವರು ಸಭಿಕರಿಗೆ ಓದಿ ತಿಳಿಸಿದರು.ಇದೇ ವೇಳೆ ಮಾತನಾಡಿದ ಡಾ| ಸಂಜೀವ ದಂಡೆಕೇರಿ ಅವರು ” 54 ವರ್ಷಗಳಲ್ಲಿ ಸರಿ ಸುಮಾರು 29000 ಕ್ಕೂ ಹೆಚ್ಚು ಪ್ರದರ್ಶನಗೊಂಡ ಈ ಬಯ್ಯ ಮಲ್ಲಿಗೆ ಯನ್ನು ಗಮ್ಮತ್ ಕಲಾವಿದೆರ್ ಬಹಳ ಅದ್ಬುತವಾದ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಊರಿನಿಂದ ಬರುವಾಗ ಇವರು ಹವ್ಯಾಸಿ ಕಲಾವಿದರು ಈ ನಾಟಕವನ್ನು ಯಾವ ರೀತಿ ಪ್ರದರ್ಶನ ನೀಡುವರು ಎಂಬ ಸಂಶಯದೊಂದಿಗೆ ಬಂದೆ, ಆದರೆ ಈ ನಾಟಕವನ್ನು ನೋಡಿದ ಮೇಲೆ ಇವರು ಕೇವಲ ಹವ್ಯಾಸಿ ಕಲಾವಿದರಲ್ಲ ಯಾವುದೇ ವೃತ್ತಿಪರ ನಾಟಕ ಕಲಾವಿದರಿಗೆ ಇವರೇನು ಕಡಿಮೆಯಲ್ಲ, ಪ್ರತಿಯೊಬ್ಬ ಕಲಾವಿದರು ಅವರವರ ಪಾತ್ರಕ್ಕೆ ಜೀವ ತುಂಬಿದರು, ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ” ಎಂದರು.ವಿಶ್ವನಾಥ್ ಶೆಟ್ಟಿಯವರ ನಿರ್ದೇಶನದಲ್ಲಿ ನಡೆದ ಬಯ್ಯ ಮಲ್ಲಿಗೆ ನಾಟಕ ನೆರೆದಿದ್ದ ತುಳು ನಾಟಕ ಪ್ರೇಮಿಗಳ ಮನಸ್ಸನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.ವಿ4 ನ್ಯೂಸ್ ಸಿಪಿಎಲ್ ಖ್ಯಾತಿಯ ಸಾಕ್ಷಿ ಕಲಾವಿದೆರ್ ತಂಡದ ಸಾರಥಿ ಶುಭಕರ್ ಬೆಳಪು ಸಂಗೀತ ನೀಡಿದರು.

ನಾಟಕದ ಕೊನೆಗೆ ನಾಟಕವನ್ನು ಅತ್ಯುತ್ತಮ ರೀತಿಯಲ್ಲಿ ನಾಟಕ ಪ್ರದರ್ಶನ ನೀಡಲು ಕಾರಣ ಕರ್ತರಾದ ಎಲ್ಲಾ ಕಲಾವಿದರಿಗೆ, ತೆರೆಯ ಹಿಂದೆ ಸಹಕರಿಸಿದ ತಂಡದ ಸದಸ್ಯರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಬೆಳಕು ಹಾಗೂ ಧ್ವನಿ ಸಂಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು…

ಗಮ್ಮತ್ ಕಲಾವಿದೆರ್ ಇದರ ಪೋಷಕರು ಹಾಗೂ ಅನುಕ್ತ ಚಿತ್ರದ ನಿರ್ಮಾಪಕರಾದ ಹರೀಶ್ ಬಂಗೇರ, ಅಧ್ಯಕ್ಷೆ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ, ಡಾ| ಸಂಜೀವ ದಂಡೆಕೇರಿ, ಉದ್ಯಮಿಗಳಾದ ಪ್ರವೀಣ್ ಶೆಟ್ಟಿ, ಸರ್ವೋತ್ತಮ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಶ್ರೀಮತಿ ಭಾಗ್ಯ ಪ್ರೇಮನಾತ್ ಶೆಟ್ಟಿ, ದಿನೇಶ್ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *