Header Ads
Breaking News

ದುಬೈ- ಉದ್ಯಾವರ ಸಂಘಟನೆಯ ವತಿಯಿಂದ ವೈದ್ಯರುಗಳಿಗೆ ಸನ್ಮಾನ

ಮಂಜೇಶ್ವರ: ಕಳೆದ ಮೂರು ದಶಕಗಳಿಂದ ದುಬೈಯಲ್ಲಿ ಕಾರ್ಯಾಚರಿಸುತ್ತಿರುವ ಉದ್ಯಾವರ ಆನಿವಾಸಿಗಳ ಸಂಘಟನೆಯಾದ ದುಬೈ ಉದ್ಯಾವರ ಸಂಘಟನೆಯ ವತಿಯಿಂದ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆಯನ್ನು ನೀಡುತ್ತಿರುವ ವೈದ್ಯರುಗಳಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ವೈದ್ಯರುಗಳಾದ ಜಯಪಾಲ ಶೆಟ್ಟಿ, ಸುಧೀರ್, ಸುಮಂಗಳ ಸುಧೀರ್, ದಿನೇಶ್ ಗಣಪತಿ ಭಟ್, ಬನಾರಿ, ಖಾದರ್ ಯು ಎ ಮೊದಲಾದ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಹಾರೀಸ್ ಉದ್ಯಾವರ, ಮೊಹಮ್ಮದ್ ಅಮಾನ್, ಮೊಯಿದೀನ್ ಕುಂ??, ಯು ಕೆ ಮೂಸ, ಕುಂ??ಪ್ಪ ಹಾಜಿ ಮೊದಲಾದವರು ನೇತೃತ್ವ ನೀಡಿದರು. ದುಬೈ ಉದ್ಯಾವರ ಸಂಘಟನೆಯ ಮುಂದಾಳತ್ವದಲ್ಲಿ ಪ್ರತೀ ವರ್ಷವೂ ಜೀವ ಕಾರುಣ್ಯಕ್ಕಾಗಿ ಪ್ರತ್ಯೇಕವಾದ ಫಂಡ್ ಗಳನ್ನು ಮೀಸಲಿರಿಸಿಟ್ಟು ಅನಾರೋಗ್ಯ, ವಿದ್ಯಾಭ್ಯಾಸ, ಮೊದಲಾದ ವಲಯಗಳಿಗೆ ಸಹಾಯ ಧನವನ್ನು ಒದಗಿಸುತ್ತಾ ಬರುತ್ತಾ ಇದೆ.

Related posts

Leave a Reply

Your email address will not be published. Required fields are marked *