Header Ads
Header Ads
Header Ads
Breaking News

ದುರ್ನಾತ ಬೀರುತ್ತಿರುವ ಬೆಳಕೆಯ ಗೊರಟೆ ಬೀಚ್ ಕೊಳೆತ ಮೀನಿನ ತ್ಯಾಜ್ಯ ಬಿಸಾಡುತ್ತಿರುವ ಮೀನುಗಾರರು ರೋಗಗಳಿಗೆ ಜೀವ ನೀಡುತ್ತಿರುವ ಮೀನಿನ ತ್ಯಾಜ್ಯ ಸಾರ್ವಜನಿಕ ವಲಯಲ್ಲಿ ಕೇಳಿ ಬರುತ್ತಿರುವ ಆರೋಪ

ಭಟ್ಕಳ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಗೊರಟೆ ಬೀಚ್‌ನಲ್ಲಿ ಮೀನಿನ ತ್ಯಾಜ್ಯ ದುರ್ನಾತ ಬೀರುತ್ತಿದ್ದು ವಿವಿಧ ರೋಗಗಳಿಗೆ ಜೀವ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೀನುಗಾರಿಕೆ ದೋಣಿಗಳಲ್ಲಿ ಕೊಳೆತ ಮೀನುಗಳನ್ನು ತೀರದಲ್ಲಿ ಎಸೆಯುತ್ತಿರುವುದರಿಂದಾಗಿ ಗೊರಟೆ ಸಮುದ್ರ ತೀರದಲ್ಲಿ ಹೊಲಸು ತುಂಬಿ ದುರ್ನಾತ ಬೀರುತ್ತಿದೆ.

ಕೊಳೆತ ಮೀನಿನ ರಾಶಿಯೆ ಇಲ್ಲಿ ಬೀಳುವುದರಿಂದಾಗಿ ತೀರದಲ್ಲಿ ನಡೆದಾಡಲು ಅಸಾಧ್ಯ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಪ್ರದೇಶದಲ್ಲಿ ವಾಸಿಸುವವರು ರೋಗ ಭೀತಿಯನ್ನು ಎದುರಿಸುತ್ತಿದ್ದು ಸ್ಥಳೀಯ ಪಂಚಾಯತ್ ಇದಕ್ಕೆ ಸೂಕ್ತ ಕ್ರಮ ಜರಗಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳಿಯ ನಿವಾಸಿ ರಾಮಾ ನಾಯ್ಕ, ಕಳೆದ ಹಲವಾರು ದಿನಗಳಿಂದ ಇಲ್ಲಿ ಕೊಳೆತ ಮೀನುಗಳಿಂದ ದುರ್ನಾತ ಬೀರುತ್ತಿದ್ದು ಯಾರೂ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ, ಈಗಾಗಲೇ ತಾಲೂಕಿನಲ್ಲಿ ಎಚ್.೧.ಎನ್.೧, ಡೆಂಗ್ಯೂ ಮುಂತಾದ ಕಾಯಿಗಳು ಕಾಡುತ್ತಿದ್ದರೂ ಇದನ್ನು ಕಂಡು ಸುಮ್ಮನಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದಲ್ಲೆಡೆ ಪ್ರಮುಖ ತಾಣಗಳನ್ನು ಸ್ವಚ್ಚಾ ಭಾರತ ಅಭಿಯಾನದಡಿ ಸಾರ್ವಜನಿಕರು, ಅಧಿಕರಿಗಳು, ವಿವಿಧ ಸಂಘಸಂಸ್ಥೆಗಳು ಸೇರಿ ಸ್ವಚ್ಚಗೊಳಿಸುತ್ತಿದ್ದು ಸರ್ಕಾರ ಗೊರಟೆ ಸಮುದ್ರ ತೀರದಲ್ಲೂ ಗಮನಹರಿಸಿ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply