Header Ads
Header Ads
Breaking News

ದುರ್ನಾಥ ಬೀರುತ್ತಿರುವ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳಕ್ಕೆ : ದೂರು ನೀಡಿದರೂ ಸ್ಪಂದಿಸದ ಅಧಿಕಾರಿಗಳು

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹದಿನಾಲ್ಕನೇ ವಾರ್ಡು ಕಟ್ಟೆ ಬಜಾರ್ ಬಾಂಗ್ರಾ ಎಂಬ ಸ್ಥಳದಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರ ವಸತಿ ಗೃಹದಿಂದ ದುರ್ನಾಥ ಭೀರುವ ತ್ಯಾಜ್ಯ ನೀರನ್ನು ಸಾರ್ವಜನಿಕರು ನಡೆದಾಡುವ ಸ್ಥಳಕ್ಕೆ ಹರಿದು ಬಿಡುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ.ಸಾರ್ವಜನಿಕ ಸ್ಥಳಕ್ಕೆ ಹರಿದು ಬಿಡುತ್ತಿರುವ ದುರ್ನಾಥ ತ್ಯಾಜ್ಯ ನೀರಿನಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಾಗಬೇಕಾದ ದುಸ್ಥಿತಿ ಬಂದೊದಗಿರುವುದಾಗಿ ಊರವರು ತಮ ಅಳಲನ್ನು ತೋಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ನೀರು ಮಳೆ ನೀರಿನೊಂದಿಗೆ ಕಲುಷಿತಗೊಂಡು ಸಮೀಪದಲ್ಲಿ ಕುಟುಂಬಗಳು ಉಪಯೋಗಿಸುತ್ತಿರುವ ಬಾವಿಗಳಿಗೂ ಹರಿದು ಹೋಗುತ್ತಿವೆ. ತ್ಯಾಜ್ಯ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ನಿರ್ಮಾಣವಾದ ವಸತಿ ಗೃಹಕ್ಕೆ ಪಂಚಾಯತ್ ಅಧಿಕೃತರು ಹೇಗೆ ಅನುಮತಿಯನ್ನು ನೀಡಿದರು ಎಂಬುದು ಕೂಡಾ ನಿಗೂಢವಾಗಿದೆ. ಈಗ ಇರುವ ವಸತಿ ಗೃಹದ ತ್ಯಾಜ್ಯ ನೀರೇ ಹರಿದು ವ್ಯವಸ್ಥೆ ಇಲ್ಲದಿರುವಾಗ ಮೇಲ್ಬಾಗಕ್ಕೆ ಮತ್ತೂ ವಸತಿ ಗೃಹದ ನಿರ್ಮಾಣ ಕಾರ್ಯ ನಡೆಯುತ್ತಿರುವುದಾಗಿಯೂ ಊರವರು ಹೇಳುತ್ತಿದ್ದಾರೆ . ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿರುವವರು ಸಾಂಕ್ರಾಮಿಕ ರೋಗಕ್ಕೆ ತುತ್ತಾದರೂ ವಿಶೇಷವೇನಿಲ್ಲ. ಅರೋಗ್ಯ ಇಲಾಖೆ ಇನ್ನೂ ಕಣ್ಣು ತೆರೆಯದೇ ಇದ್ದರೆ ಇಂತಹ ಘಟನೆಗಳು ಸಾಂಭಾವಿಸುವ ಸಾಧ್ಯತೆ ಹೆಚ್ಚು. ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗುವುದಾಗಿ ಊರವರು ಎಚ್ಚರಿಕೆಯ ಕರೆಗಂಟೆ ಭಾರಿಸಿದ್ದಾರೆ.

Related posts

Leave a Reply

Your email address will not be published. Required fields are marked *