Header Ads
Breaking News

ದುಶ್ಚ್ಚಟ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಶಿಬಿರದ ಜಾಥಾ : ಡಾ ಎಂ.ಮೋಹನ ಆಳ್ವರಿಂದ ಚಾಲನೆ

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಮತ್ತು ಮೂಡುಬಿದಿರೆ ಇದರ ವತಿಯಿಂದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಪ್ರಯುಕ್ತ ನಡೆದ ದುಶ್ಚ್ಚಟ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಶಿಬಿರದ ಜಾಥಾವು ಸ್ವರಾಜ್ಯ ಮೈದಾನದಿಂದ ಪದ್ಮಾವತಿ ಕಲಾ ಮಂದಿರದವರೆಗೆ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ.ಮೋಹನ ಆಳ್ವ ಜಾಥಾಕ್ಕೆ ಚಾಲನೆಯನ್ನು ನೀಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ವಲಯದ ಯೋಜನಾಧಿಕಾರಿ ನಾರಾಯಣ ಶೆಟ್ಟಿ , ಕಾರ್ಕಳದ ಯೋಜನಾಧಿಕಾರಿ ಗಣೇಶ್, ಜನಜಾಗೃತಿ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಸಮಿತಿಯ ಜೊಸ್ಸಿ ಮಿನೇಜಸ್, ಪ್ರವೀಣ್ ಜೈನ್ ಮತ್ತಿತರರಿದ್ದರು.ಸುಮಾರು 800 ಮಂದಿ ಮದ್ಯ ಮುಕ್ತರು, ಗ್ರಾಮಾಭಿವೃಧ್ದಿ ಯೋಜನೆಯ ಸದಸ್ಯರುಗಳು, ವಿವಿಧ ಕಲಾ ತಂಡಗಳು ಜಾಥಾದಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *