Header Ads
Header Ads
Breaking News

ದುಷ್ಕರ್ಮಿಗಳಿಂದ ಸಂಜೀವ ಪೂಜಾರಿ ಮೇಲೆ ಮಾರಣಾಂತಿಕ ಹಲ್ಲೆ ಬಂಟ್ವಾಳ ಮೆಲ್ಕಾರ್ ಸಮೀಪ ಮಾರ್ನಬೈಲ್‌ನಲ್ಲಿ ಎಂಬಲ್ಲಿ ಘಟನೆ

ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ರೈ ಆಪ್ತ ಹಾಗೂ ಬಿಲ್ಲವ ಮುಖಂಡ ಸಂಜೀವ ಪೂಜಾರಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೆಲ್ಕಾರ್ ಸಮೀಪದ ಮಾರ್ನಬೈಲ್ ಎಂಬಲ್ಲಿ ನಡೆದಿದೆ. 

ಇಲ್ಲಿನ ಮೆಲ್ಕಾರ್ ಸಮೀಪದ ಮಾರ್ನಬೈಲ್ ನಿವಾಸಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ ಬಂಟ್ವಾಳ ತಾಲೂಕು ಪಂ. ಸದಸ್ಯ ಸಜಿಪಮೂಡು ಗ್ರಾಮದ ಮಿತ್ತಮಜಲು ಸಮೀಪದ ಕುಚ್ಚಿಗುಡ್ಡೆಯ ಮುಖಂಡರೂ ಆಗಿರುವ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಪೂಜಾರಿ, ಅವರ ಪತ್ನಿ ಸಹಿತ ಸಂಸ್ಥೆಯ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರಲ್ಲದೆ ಅವರ ಕಾರಿಗೂ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೂಜಾರಿ ಅವರು ತಮ್ಮ ಕಾರ್ಯ ನಿರ್ವಹಣೆಯ ಬಳಿಕಗುರುವಾರ ಮಧ್ಯರಾತ್ರಿ ಮಾರ್ನಬೈಲಿನಲ್ಲಿರುವ ಮನೆಗೆ ಬಂದಿದ್ದು. ಅವರ ಸಿಬ್ಬಂದಿ ಇವರನ್ನು ಮನೆಗೆ ಬಿಟ್ಟು ಬಳಿಕ ವಾಪಸ್ಸು ಹೋಗುತ್ತಿದ್ದ ವೇಳೆ ಕಾರನ್ನು ತಡೆದು ದುಷ್ಕರ್ಮಿಗಳ ತಂಡ ಕಾರಿನಲ್ಲಿದ್ದವರನ್ನು ಎಳೆದು ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಗೂ ನುಗಿ ಸಂಜೀವ ಪೂಜಾರಿ ಹಾಗೂ ಅವರ ಪತ್ನಿ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಿಂದ ಪೂಜಾರಿ ಅವರ ಸಿಬ್ಬಂದಿ ಶಂಕರ,ಅಮ್ಮಿ, ಇಕ್ಟಾಲ್ ಮೊದಲಾದವರು ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಸಚಿವ ರಮಾನಾಥ ರೈ ಸಹಿತ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭಾರೀ ಸಮಖ್ಯೆಯಲ್ಲಿ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ತುಂಭೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಎಡಿಶನಲ್ ಎಸ್ಪಿ ಸುಜಿತ್, ಬಂಟ್ವಾಳ ಗ್ರಾಮಾಂತರ ಠಾಣೆ ಐಸಿಎಸ್ ಅಧಿಕಾರಿ ಅಕ್ಷಯ್, ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply