Header Ads
Breaking News

ದೃಶ್ಯ ಪರಂಪರೆ ಕಟ್ಟಿಕೊಡಬೇಕಾದದ್ದು ಕಲಾವಿದರ ದೊಡ್ಡ ಜವಾಬ್ದಾರಿ : ಹಿರಿಯ ಕಲಾವಿದ ಡಾ. ಎಮ್.ಎಸ್ ಮೂರ್ತಿ ಹೇಳಿಕೆ

 ಕುಂದಾಪುರ: ಈಗಾಗಲೇ ನಮ್ಮ ಇಡೀ ಕನ್ನಡ ಸಂಸ್ಕೃತಿ ಅಕ್ಷರವನ್ನು ಆತುಕೊಂಡಿದೆ. ಅಕ್ಷರವಿಲ್ಲದೇ ನಾವು ಏನನ್ನೂ ಮಾಡಲಾರೆವು ಎನ್ನುವ ನಂಬಿಕೆ ನಮ್ಮಲ್ಲಿ ಹುಟ್ಟುಹಾಕಿದೆ. ಮುಂದಿನ ತಲೆಮಾರಿಗೆ ದೃಶ್ಯ ಪರಂಪರೆ ಅತೀ ಮುಖ್ಯವಾಗಿ ಬೇಕಾಗುತ್ತದೆ. ಹೀಗಾಗಿ ದೃಶ್ಯ ಪರಂರೆಯನ್ನು ಕಟ್ಟಿಕೊಡಬೇಕಾದದ್ದು ಕಲಾವಿದರ ದೊಡ್ಡ ಜವಾಬ್ದಾರಿ. ಇದನ್ನು ಎಚ್ಚರದಿಂದ ಮಾಡಬೇಕು ಎಂದು ಹಿರಿಯ ಕಲಾವಿದ, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎಮ್.ಎಸ್ ಮೂರ್ತಿ ಹೇಳಿದರು.

ಅವರು ಯುವಮೆರಿಡಿಯನ್ ಮಿನಿ ಹಾಲ್ನಲ್ಲಿ ಜರುಗಿದ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭೂಮಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಮೆರಿಡಿಯನ್ ಗ್ರೂಪ್ಸ್ ಸಹಯೋಗದೊಂದಿಗೆ ನಡೆದ ಚೈತ್ರಾ ರಾಷ್ಟ್ರೀಯ ಕಲಾ ಶಿಬಿರ-2021ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆರ್ಟ್ ಕ್ಯಾಂಪ್ನಲ್ಲಿ ಕಲ್ಕತ್ತಾದ ಸಮೀರ್, ಆಂಧ್ರಪ್ರದೇಶದ ಗಿರಿಧರ್ ಗೌಡ, ಗೋವಾದ ಹರ್ಷದ್, ಮೈಸೂರಿನ ರವೀಶ್, ಕುಂಭಕೋಣಂನ ವಿಎಸ್ಡಿ ಅರುಲರಸನ್, ವಾರಾಣಸಿಯ ಸುರೇಶ್ ಕೆ ನಾಯರ್, ತಮಿಳುನಾಡಿನ ಕುಮಾರೇಸನ್, ಗಲ್ಬರ್ಗಾದ ಡಾ. ಅಶೋಕ್ ಶೇಟ್ಗಾರ್, ಬಾಗಲಕೋಟೆಯ ಖಾಸೀಂ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *