Header Ads
Header Ads
Breaking News

ದೃಷ್ಟಿ ಕಳೆದುಕೊಂಡ ಗರುಡ ಪಕ್ಷಿಗೆ ನೇತ್ರ ಚಿಕಿತ್ಸೆ

ಗರುಡ ವಿಷ್ಣುವಿನ ವಾಹನ. ಆಧುನಿಕ ಜಗತ್ತಿನಲ್ಲಿಯೂ ಗರುಡನಿಗಿದೆ ಮಹತ್ವ. ಈ ಕಾರಣದಿಂದಲೇ ಗರುಡ ಪಕ್ಷಿಗೆ ನೇತ್ರ ಚಿಕಿತ್ಸೆ ಅರಂಭವಾಗಿದೆ. ಯಾವುದೋ ಕಾರಣಕ್ಕೆ ಕಣ್ಣು ಕಳೆದುಕೊಂಡ ಪಕ್ಷಿಗೆ ನೇತ್ರ ಚಿಕಿತ್ಸೆ ಆರಂಭಿಸಿರುವುದು ಅಪರೂಪದ ಪ್ರಕರಣವಾಗಿದೆ.

ಕಣ್ಣಿನ ಸಮಸ್ಯೆ ಇದ್ದವರಿಗೆ ನೇತ್ರ ಚಿಕಿತ್ಸೆ ನಡೆಯುತ್ತದೆ. ಆದ್ರೆ ಪಕ್ಷಿಗೂ ನೇತ್ರ ಚಿಕಿತ್ಸೆ ಕೇಳಿರಲಿಕ್ಕಿಲ್ಲ. ಆದ್ರೆ ಉಡುಪಿಯಲ್ಲಿ ಗರುಡ ಪಕ್ಷಿಗೆ ನೇತ್ರ ಚಿಕಿತ್ಸೆ ಆರಂಭಿಸಲಾಗಿದೆ.ಬಿಳಿ ಕತ್ತಿನ ಗರುಡ  ಪೇಜಾವರ ಮಠದ ಆವರಣದಲ್ಲಿರುವ ಮರದಿಂದ ಕೆಳಗೆ ಬಿದ್ದಿತ್ತು. ಇದನ್ನ ಮಠದ ವಿದ್ಯಾರ್ಥಿಗಳು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನರ ಗಮನಕ್ಕೆ ತಂದರು. ಕಣ್ಣು ಕಾಣದಿರುವ ಕಾರಣ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಮಾಡಿದರು. ಕೊನೆಗೆ ಶ್ರೀಗಳು ಕಣ್ಣಿನ ಚಿಕಿತ್ಸೆ ಕೊಡಿಸಿದರೆ ಹೇಗೆ ಅಂದು ಕೊಂಡು ನೇತ್ರ ತಜ್ಞ ಡಾ. ಕೃಷ್ಣ ಪ್ರಸಾದ್ ಅವರ ಗಮನಕ್ಕೆ ತಂದರು. ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದಲ್ಲಿ ಡಾ. ಕೃಷ್ಣ ಪ್ರಸಾದ್ ಹಾಗೂ ಅವರ ತಂಡ ಗರುಡನ ಕಣ್ಣು ಪರೀಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಗರುಡನಿಗೆ ಬೆಳ್ಳಗೆ ಕಣ್ಣುಗಳು ಆವರಿಸಿದ್ದು ಎರಡೂ ಕಣ್ಣುಗಳು ಕಾಣದಾಗಿದೆ. ಕಣ್ಣಿಗೆ ಆವರಿಸಿರುವ ಕಪ್ಪು ಗುಡ್ಡೆಯು ಔಷದಿಯಿಂದಲೇ ಸರಿ ಹೋದರೆ ಗರುಡನಿಗೆ 60ರಿಂದ 70 ಶೇಕಡಾ ದೃಷ್ಟಿ ಸಾಮರ್ಥ್ಯ ಬರುವ ಸಾಧ್ಯತೆ ಇದೆ.ಹೀಗಾದರೆ ಶಸ್ತ್ರಚಿಕಿತ್ಸೆ ಅಗತ್ಯ ಇರೋದಿಲ್ಲ. ಕರಿಗುಡ್ಡೆ ಕಪ್ಪಾಗಿ ಹೊರಗಡೆಯಿಂದ ಪೊರೆ ಆವರಿಸಿದರೆ ಕಣ್ಣು ಕಾಣಿಸದಿರುವ ಸಾಧ್ಯತೆ ಇದೆ. ಹೀಗಾದರೆ 15 ದಿನದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರ ತಂಡ ಸಿದ್ದವಾಗಿದೆ. ೧೫ ದಿನಗಳ ಕಾಲ ಕಣ್ಣಿಗೆ ಡ್ರಾಪ್ಸ್ ಹಾಕಿ ದೃಷ್ಟಿ ಮರಳುತ್ತಾ ಎಂಬುದನ್ನ ಕಾದು ನೋಡಲಿದ್ದಾರೆ. ಇದೀಗ ಮಠದಲ್ಲಿಯೇ ಗರುಡ ಆರೈಕೆ ಪಡೆದುಕೊಳ್ಳುತ್ತಿದೆ.

ಗರುಡ ಪಕ್ಷಿಗೆ ಕಣ್ಣಿನ ಚಿಕಿತ್ಸೆ ಆರಂಭಿಸುರುವ ಪ್ರಕರಣ ಇದು ಅಪರೂಪದ್ದಾಗಿದೆ. ಕಣ್ಣು ಬರುವಂತೆ ಮಾಡಲು ವೈದ್ಯರ ತಂಡ ಶ್ರಮಪಟ್ಟಿದೆ. ವನ್ಯ ಜೀವಿ ವಿಭಾಗದ ಅಧಿಕಾರಿಗಳು ಮಠಕ್ಕೆ ಬಂದು ಗರುಡ ಪಕ್ಷಿಯ ಆರೈಕೆಯ ಜವಾಬ್ಧಾರಿಯನ್ನು ಶ್ರೀಗಳಿಗೇ ನೀಡಿದ್ದಾರೆ. ಗರುಡನಿಗೆ ಕಣ್ಣು ಬರುತ್ತೋ ಅಥವಾ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆಯೋ ಎಂಬುದನ್ನು ಮಾತ್ರ ಕಾದು ನೊಡ ಬೇಕಾಗಿದೆ.
ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply