Header Ads
Breaking News

ದೆವ್ವದಂತೆ ಭಾಸವಾಗುವ ಅಪರೂಪದ ಜಾತಿಯ ಮೀನು ಬಲೆಗೆ

ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದೆ. ಸುಮಾರು ಐದು ಅಡ್ಡಿ ಉದ್ದವಿರುವ ಈ ಮೀನು ಆರು ಕೆಜಿಯಷ್ಟು ತೂಕವಿದೆ. ಒಮ್ಮೆಗೆ ಕಂಡರೆ ದೆವ್ವದಂತೆ ಭಾಸವಾಗುವ ಅಪರೂಪದ ಜಾತಿಯ ಮೀನಿದು.

ಸಾಮಾನ್ಯ ಭಾಷೆಯಲ್ಲಿ ಹೇಳೋದಾದರೆ ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ , ಡೆವಿಲ್ ಫಿಶ್ ಎಂದೇ ಈ ಮೀನು ಖ್ಯಾತಿ ಪಡೆದಿದೆ. ಅರಬ್ಬೀ ಸಮುದ್ರ ಮತ್ತು ಹಿಂದೂ ಮಗಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ 150 ಮೀಟರ್ ಆಳದಲ್ಲಿ ಈ ಆಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತೆ. ಈ ತಳಿಯ ಮೀನಿನ ವಿಶೇಷ.

Related posts

Leave a Reply

Your email address will not be published. Required fields are marked *