Header Ads
Header Ads
Breaking News

ದೆಹಲಿಯಿಂದ ವಾಶಿಂಗ್ಟನ್‌ಗೆ ನೇರ ವಿಮಾನ, ಏರ್ ಇಂಡಿಯಾದ ಹೊಸ ಸೇವೆ ಆರಂಭ

ದೆಹಲಿ ಮತ್ತು ವಾಷಿಂಗ್ಟನ್ ಡಿಸಿ ನಡುವೆ ನೇರ ಏರ್ ಇಂಡಿಯಾ ವಿಮಾನ ಸೇವೆ ಶುಕ್ರವಾರ ಆರಂಭವಾಗಿದೆ. ಡಲ್ಲಾಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೊದಲ ವಿಮಾನವನ್ನು ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು.
ವಿಮಾನ ಇಳಿಯುತ್ತಿದ್ದಂತೆ ಸಾಂಪ್ರದಾಯಿಕ ಪ್ರಾರ್ಥನೆ ನಡೆಸಲಾಯಿತು. ವಾರದಲ್ಲಿ ಮೂರು ಬಾರಿ ಈ ವಿಮಾನ ಹಾರಾಟ ನಡೆಸಲಿದ್ದು, ಎರಡು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳ ರಾಜಧಾನಿಗಳ ನಡುವೆ ಸಂಪರ್ಕಕ್ಕೆ ಅನುಕೂಲವಾಗಲಿದೆ. ಅಮೆರಿಕದಲ್ಲಿನ ಭಾರತದ ರಾಯಭಾರಿ ನವತೇಜ್ ಸರ್ನಾ, ಏರ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹಾನಿ ಮತ್ತು ಸಂಸ್ಥೆಯ ವಾಣಿಜ್ಯ ವಿಭಾಗದ ನಿರ್ದೇಶಕ ಪಂಕಜ್ ಶ್ರೀವಾತ್ಸವ ಉದ್ಘಾಟನಾ ವಿಮಾನದಲ್ಲಿ ಪ್ರಯಾಣಿಸಿದ ಪ್ರಮುಖರು.
ಸದ್ಯ ನೇವಾರ್ಕ್, ನ್ಯೂಯಾರ್ಕ್ ಮತ್ತು ಷಿಕಾಗೊ ನಡುವೆ ಪ್ರತಿದಿನ ವಿಮಾನ ಸೌಲಭ್ಯವಿದೆ. ದೆಹಲಿ ಸ್ಯಾನ್ಫ್ರಾನ್ಸಿಸ್ಕೊ ನಡುವಿನ ವಿಮಾನ ವಾರದಲ್ಲಿ ಆರು ಬಾರಿ ಹಾರಾಟ ನಡೆಸುತ್ತಿದೆ. ಲಾಸ್ ಏಂಜಲೀಸ್, ಹ್ಯೂಸ್ಟನ್ ಸೇರಿದಂತೆ ಅಮೆರಿಕದ ಇತರ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲು ಏರ್ ಇಂಡಿಯಾ ಉದ್ದೇಶಿಸಿದೆ. ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ. ೨೦ರಷ್ಟು ಪಾಲು, ಅಮೆರಿಕಕ್ಕೆ ವಿಮಾನ ಸೌಲಭ್ಯ ಒದಗಿಸಿರುವುದರಿಂದ ಬರುತ್ತಿದೆ.

Related posts

Leave a Reply