Header Ads
Header Ads
Header Ads
Breaking News

ದೆಹಲಿ ಮೂಲದ ಮಹಿಳೆಯ ರಕ್ಷಣೆ ಸಾಮಾಜಿಕ ಕಾರ್ಯಕರ್ತರಿಂದ ರಕ್ಷಣೆ, ಸಹಾಯ ಹಸ್ತ ಉಡುಪಿಯಲ್ಲಿ ಅಸಾಹಯಕ ಸ್ಥಿತಿಯಲ್ಲಿದ್ದ ಮಹಿಳೆ

ಅಸಹಾಯಕ ಪರಿಸ್ಥಿತಿಯಲ್ಲಿ ಪತ್ತೆಯಾದ ದೆಹಲಿ ಮೂಲದ ಯುವತಿಯನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಕೆಯನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಿ ಆಶ್ರಮಕ್ಕೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸುಮಾರು 35 ರ, ಆಸುಪಾಸು ವಯಸ್ಸಿನ, ಹಿಂದಿ ಭಾಷೆ ಮಾತನಾಡುವ ಯುವತಿಯೊರ್ವಳು ಉಡುಪಿಯ ಪೇಜಾವರ ಮಠಕ್ಕೆ ಬಂದಿದ್ದಾಳೆ. ಅಲ್ಲಿ ತನ್ನ ಅಸಹಾಯಕ ಪರಿಸ್ಥಿತಿಯನ್ನು ಮಠದ ವಾಸಿಗಳಲ್ಲಿ ಹೇಳಿ ಕೊಂಡಿದ್ದಾಳೆ.

ಮಠದ ಸಿಬ್ಭಂದಿಗಳು ವಿಷಯವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದು ನಿತ್ಯಾನಂದ ಒಳಕಾಡು ಅವರು ಗಳೆಯ ತಾರಾನಾಥ್ ಮೇಸ್ತ ಅವರೊಂದಿಗೆ ಜೊತೆಗೂಡಿ ಮಠದಲ್ಲಿದ್ದ ಯುವತಿಯನ್ನು ಸಂಪರ್ಕಿಸಿದ್ದಾರೆ. ನಂತರ ಯುವತಿಯಲ್ಲಿ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆಕೆಯನ್ನು ಕೌನ್ಸಿಲಿಂಗ್ ನಡೆಸಿ ಬಳಿಕ ಕೊರಂಗ್ರಪಾಡಿಯ ಆಶ್ರಮಕ್ಕೆ ಕಳುಹಿಸಿಕೊಡಲಾಗಿತ್ತು. ಆದ್ರೆ ಆಕೆ ಬ್ರಾಹ್ಮಣ ವರ್ಗಕ್ಕೆ ಸೇರಿರುವ ಬಗ್ಗೆ ಹಾಗೂ ತನಗೆ ಸಸ್ಯಹಾರಿ ಊಟ ಅಗತ್ಯ ವಿದೆ ಎಂದಾಗ ಸಾಮಾಜಿಕ ಕಾರ್ಯಕರ್ತರು ಮಂಜೇಶ್ವರದ ಆಶ್ರಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಮಾತ್ರವಲ್ಲದೇ ಉಡುಪಿಯ ಮಠದ ವತಿಯಿಂದ ಅಕ್ಕಿ ಮತ್ತಿತರ ಸಾಮಾಗ್ರಿಗಳನ್ನು ಮಹಿಳೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Related posts

Leave a Reply