Header Ads
Breaking News

ದೆಹಲಿ ಹಿಂಸಾಚಾರ ವಿರೋಧಿಸಿ ಪ್ರತಿಭಟನೆ; ಕೆ.ಸಿ ರೋಡ್ ಜಂಕ್ಷನ್‍ನಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ

ಉಳ್ಳಾಲ: ಫ್ಯಾಸಿಸ್ಟ್ ಶಕ್ತಿಗಳು ಆಯುಧ ಮುಖೇನ ಹತ್ಯಾಕಾಂಡವನ್ನು ನಡೆಸಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಿ ಬೇಕಾದರೂ ಇಂತಹ ಕೃತ್ಯ ನಡೆಯುವ ಸಂಭವ ಇದೆ. ಇದನ್ನು ವಿರೋಧಿಸುವತ್ತ ಜನ ಸಿದ್ಧರಾಗಿರಬೇಕು ಎಂದು ಸಂಯುಕ್ತ ನಾಗರಿಕ ವೇದಿಕೆ ಅಧ್ಯಕ್ಷ  ಸಿದ್ದೀಖ್ ತಲಪಾಡಿ ಹೇಳಿದರು.

ಅವರು ಸಂಯುಕ್ತ ನಾಗರಿಕ ವೇದಿಕೆ ಕೆ.ಸಿರೋಡ್ ಇದರ ವತಿಯಿಂದ ದೆಹಲಿಯಲ್ಲಿ ನಡೆದ ಹತ್ಯಾಕಾಂಡ ಮತ್ತು ಮುಸ್ಲಿಮರ ವಿರುದ್ದ ವ್ಯವಸ್ಥಿತವಾಗಿ ಫ್ಯಾಸಿಸ್ಟ್ ಶಕ್ತಿಗಳು ಮಾಡುತ್ತಿರುವ ಕ್ರೌರ್ಯ ಖಂಡಿಸಿ ಕೆ.ಸಿ ರೋಡ್ ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆ ಹಾಗೂ ಮೌನ ಪ್ರಾರ್ಥನೆ ಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ದೆಹಲಿಯಲ್ಲಿ ಹತ್ಯೆಗೀಡಾದ ಅಮಾಯಕರಿಗೆ ಗೌರವಾರ್ಥ ವಾಗಿ ಮೂರು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನಡೆಸಲಾಯಿತು.

ಈ ಸಂದರ್ಭ ಗೌರವಾಧ್ಯಕ್ಷ ಅಬ್ಬಾಸ್ ಪೆರಿಬೈಲ್, ಇರ್ಷಾದ್ ಅಜ್ಜಿನಡ್ಕ, ಸಲಾಂ ಉಚ್ಚಿಲ್, ರಹೀಂ ಉಚ್ಚಿಲ್ ಯು.ಬಿ.ಎಂ, ಇಸ್ಮಾಯಿಲ್ ತಲಪಾಡಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *