Header Ads
Header Ads
Header Ads
Breaking News

ದೇಯಿಬೈದೆದಿ ಔಷಧ ವನ 2ನೇ ಹಂತದ ಅಭಿವೃದ್ದಿಗೆ ಸಿದ್ಧತೆ: ಪುತ್ತೂರಿನಲ್ಲಿ ಸಚಿವ ರಮಾನಾಥ ರೈ

ಪುರಾಣಪ್ರಸಿದ್ದ ಅವಳಿವೀರರಾದ ಕೋಟಿಚೆನ್ನಯರ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರ ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧ ವನದ 2ನೇ ಹಂತದ ಅಭಿವೃದ್ದಿಗೆ ಯೋಜನೆ ರೂಪಿಸಿದ್ದು, ಪ್ರಸ್ತಾವನೆ ಹಂತದಲ್ಲಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.

ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧ ವನಕ್ಕೆ ಬುಧವಾರ ಬೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ತನ್ನ ಸ್ವ ಇಚ್ಛೆಯಿಂದ ದೇಯಿಬೈದೆದಿ ಔಷಧ ವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೆ, ಯಾರೂ ಮನವಿ ನೀಡಿದ ನಂತರ ವನ ನಿರ್ಮಾಣಕ್ಕೆ ಯೋಜನೆಗೆ ಕೈಹಾಕಿಲ್ಲ. ಮುಂದೆಯೂ ಈ ವನದ ಅಭಿವೃದ್ದಿಗೆ ನಾನು ಹೆಚ್ಚಿನ ಅನುದಾನ ನೀಡಲು ಸಿದ್ದ. ದೇಯಿಬೈದೆದಿ ಔಷಧ ವನದ 2ನೇ ಹಂತದ ಅಭಿವೃದ್ದಿಗೆ ಯೋಜನೆ ರೂಪಿಸಿದ್ದು, ಮುಂದಿನ ದಿನದಲ್ಲಿ ಈ ವನವನ್ನು ಸಾರ್ವಜನಿಕರ ಮೆಚ್ಚಿನ ತಾಣವಾಗಿ ಮಾಡಲಾಗುವುದು ಎಂದರು.
*ಔಷಧ ವನಕ್ಕೆ ಪ್ರವೇಶ ಶುಲ್ಕ ನಿಗಧಿ
ಕಳೆದ ಕೆಲವು ದಿನದ ಹಿಂದೆ ಈಶ್ವರಮಂಗಲದ ಹನೀಫ್ ಎಂಬಾತ ಔಷಧೀಯ ವನದಲಿರುವ ದೇಯಿ ಬೈದದಿಯ ಪುತ್ಥಳಿಯ ಪಕ್ಕದಲ್ಲಿ ಕೂತು ಅಶ್ಲೀಲ ಭಂಗಿಯಲ್ಲಿ ಪುತ್ಥಳಿಯ ಎದೆಯನ್ನು ಮುಟ್ಟುವ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣ ಗಮನಿಸಿದಾಗ ಕೆಲವು ಕಿಡಿಗೇಡಿಗಳು ಈ ಪಾರ್ಕನ್ನು ತಮ್ಮ ಕುಚೇಷ್ಟೆಗಳ ತಾಣವನ್ನಾಗಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಔಷಧ ವನಕ್ಕೆ ಪ್ರವೇಶ ಶುಲ್ಕ ನಿಗಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
*ಕಲಾವಿದನ ಪರಿಕಪ್ಪನೆಗೆಗೆ ಹಾಲೆರೆದರೇನು ಫಲ
ದೇಯಿಬೈದೆದಿ ಪುತ್ಥಳಿಗೆ ಅವಮಾನ ಖಂಡನೀಯ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು. ಪ್ರಕರಣದ ಬಳಿಕ ಔಷಧ ವನದ ದೇಯಿಬೈದೆದಿ ಮೂರ್ತಿಗೆ ಹಾಲೆರೆದು ಶುದ್ದೀಕರಿಸಲು ಇದೇನು ವೈದಿಕ ವಿಧಾನಗಳಿಂದ ಪ್ರತಿಸ್ಟಾಪಿಸಲ್ಪಟ್ಟ ಮೂತಿಯಲ್ಲ, ಕಲಾವಿದನ ಪರಿಕಪ್ಪನೆಯಲ್ಲಿ ನಿರ್ಮಾಣವಾದ ಕೆತ್ತನೆ, ದೇಯಿ ಬೈದೆದಿಯ ಮೂಲ ರೂಪವನ್ನು ಯಾರೂ ನೋಡಿದವರಿಲ್ಲ. ಪುತ್ಥಳಿ ಅವಮಾನ ಪ್ರಕರಣದ ಬಳಿಕ ಕೆಲವರು ವನದ ದೇಯಿಬೈದೆದಿ ಮೂರ್ತಿಗೆ ಹಾಲೆರೆದು ಶುದ್ದೀಕರಿಸಿದ್ದು, ಇದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ರೈ ಪ್ರಶ್ನಿಸಿದರು.
ಶಾಸಕಿ ಶಕುಂತಳಾ ಟಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಡಿಸಿಎಫ್ ಕರಿಕಲನ್, ಪುತ್ತೂರು ಎಸಿಎಫ್ ಸುಭ್ರಹ್ಮಣ್ಯ ರಾವ್, ಪುತ್ತೂರು ಆರ್‌ಎಫ್‌ಒ ಕಾರ್ಯಪ್ಪ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ, ಜಿಪಂ ಸದಸ್ಯೆ ಅನಿತಾ ಹೇಮಾನಾಥ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply